P U C ಫಲಿತಾಂಶ

2013-14ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮೇ 8ರ ಬೆಳಿಗ್ಗೆ 8.30ಕ್ಕೆ ಪ್ರಕಟಿಸಿದ್ದಾರೆ. ಈ ಫಲಿತಾಂಶ ಇಂದು ಇಂಟರ್ನೆಟ್ ನಲ್ಲಿ ಮಾತ್ರ ಲಭ್ಯವಾಗಿರಲಿದೆ. ಆಯಾ ಕಾಲೇಜುಗಳಲ್ಲಿ ಮೇ 9ರ ಬೆಳಿಗ್ಗೆ ಲಭ್ಯವಾಗಲಿದೆ. ಮಲ್ಲೇಶ್ವರದಲ್ಲಿರುವ ಪಿಯು ಬೋರ್ಡ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.
ಪ್ರತಿವರ್ಷ ಸಂಜೆ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ಬೆಳಿಗ್ಗೆಯೇ ಪ್ರಕಟವಾಗಿದೆ. ಪ್ರಸಕ್ತ ವರ್ಷ ಶೇ.68.75 ರಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕಿಂತ ಶೇ.10ರಷ್ಟು ಫಲಿತಾಂಶದಲ್ಲಿ ಏರಿಕೆಯಾಗಿದೆ. ನಿರೀಕ್ಷೆಯಂತೆ ದಕ್ಷಿಣ ಕನ್ನಡ (ಶೇ.86.04), ಉಡುಪಿ (ಶೇ.85.57) ಮತ್ತು ಕೊಡಗು (ಶೇ.75.87) ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದು, ಬೀದರ್ (ಶೇ.44.85) ಕೊನೆ ಸ್ಥಾನ ಪಡೆದುಕೊಂಡಿದೆ.

ಈ ಬಾರಿ ಕೂಡ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದು ಶೇ.66.81 ರಷ್ಟು ಉತ್ತೀರ್ಣರಾಗಿದ್ದರೆ, ವಿದ್ಯಾರ್ಥಿಗಳು ಶೇ.54.46ನಷ್ಟು ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ 6,13,705  ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು, ಅವರಲ್ಲಿ 3,71,116  ಪಾಸಾಗಿದ್ದಾರೆ. ವಿದ್ಯಾರ್ಥಿನಿಯರು 199,560  ಮತ್ತು ವಿದ್ಯಾರ್ಥಿಗಳು 171,556  ತೇರ್ಗಡೆಯಾಗಿದ್ದಾರೆ. ಒಟ್ಟು 45 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ನಗರ ಪ್ರದೇಶಗಳಿಂತ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದು ಶೇ 61.51  ರಷ್ಟು ಫಲಿತಾಂಶ ಗ್ರಾಮೀಣ ಪ್ರದೇಶದಲ್ಲಿ ಬಂದಿದೆ. ನಗರದ ಫಲಿತಾಂಶ ಶೇ60.15 ರಷ್ಟಿದೆ.
ವಿಭಾಗವಾರು ಫಲಿತಾಂಶ : ಈ ಬಾರಿಯ ಫಲಿತಾಂಶದಲ್ಲಿ ಶೇ 51.25  ರಷ್ಟು ಫಲಿತಾಂಶ ಕಲಾವಿಭಾಗದಲ್ಲಿ, ಶೇ 70.08 ರಷ್ಟು ಫಲಿತಾಂಶ ವಾಣಿಜ್ಯ ವಿಭಾಗದಲ್ಲಿ ಮತ್ತು ಶೇ 62.19 ರಷ್ಟು ಫಲಿತಾಂಶ ವಿಜ್ಞಾನವಿಭಾಗದಲ್ಲಿ ಬಂದಿದೆ.
ಜಾತಿವಾರು ಲೆಕ್ಕಾಚಾರ : 2014ರ ಫಲಿತಾಂಶದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೇ 49.47ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ 52.41ರಷ್ಟು, ಪ್ರವರ್ಗ -1ರವಿದ್ಯಾರ್ಥಿಗಳು 59.08 ರಷ್ಟು ಮತ್ತು ಇತರೆ ವಿದ್ಯಾರ್ಥಿಗಳು ಶೇ 63.94 ರಷ್ಟು ಫಲಿತಾಂಶ ಪಡೆದಿದ್ದಾರೆ.
ಮಾಧ್ಯಮವಾರು ಫಲಿತಾಂಶ :
ಕನ್ನಡ ಮಾಧ್ಯಮದ 1,61,892 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಶೇ 55.14 ರಷ್ಟು ಫಲಿತಾಂಶ ಲಭ್ಯವಾಗಿದೆ.
ಇಂಗ್ಲಿಷ್ ಮಾಧ್ಯಮದ 2,09,224  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 65.36  ರಷ್ಟು ಫಲಿತಾಂಶ ಬಂದಿದೆ.

ಅಂಧರು ಉತ್ತೀರ್ಣ : ಈ ಬಾರಿ 584 ಅಂಧರು ಪರೀಕ್ಷೆ ಬರೆದಿದ್ದರು ಇವರಲ್ಲಿ 372 ಮಂದಿ ಉತ್ತೀರ್ಣರಾಗಿದ್ದಾರೆ.
1632ಮಂದಿ ಇತರೆ ಅಂಗವಿಕಲರು ಪರೀಕ್ಷೆ ಬರೆದಿದ್ದರು ಇವರಲ್ಲಿ 950 ಜನರು ಪಾಸಾಗಿದ್ದಾರೆ.
2014ರ ಫಲಿತಾಂಶದಲ್ಲಿ 36,344  ವಿದ್ಯಾರ್ಥಿಗಳು ಪಡೆದಿದ್ದರೆ, 1,83,788  ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. 69,914  ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, 39,768  ವಿದ್ಯಾರ್ಥಿಗಳು ತೃತೀಯ ದರ್ಜೆ ಪಡೆದು ಪಾಸಾಗಿದ್ದಾರೆ.
ಸಪ್ಲಿಮೆಂಟರಿ ಪರೀಕ್ಷೆ
2014ರ ಜುಲೈನಲ್ಲಿ ಪೂರಕ ಪರೀಕ್ಷೆ ನಡೆಯಲಿದೆ. ಆಯಾ ಕಾಲೇಜುಗಳಲ್ಲಿ ಪರೀಕ್ಷಾ ಶುಲ್ಕ ಪಾವತಿಸಿ ಅರ್ಜಿಸಲ್ಲಿಸಲು ಮೇ 22ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವಿಷಯಕ್ಕೆ 101 ಮತ್ತು ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ರೂ.302 ಶುಲ್ಕವನ್ನು ನಿಗದಿಗೊಳಿಸಲಾಗಿದೆ.

Kinnigoli-08051401

 

 

Comments

comments

Comments are closed.

Read previous post:
ಪೋಲೀಸ್ ಅತಿಥಿಯಾದ ಬಸ್ ನಿರ್ವಾಹಕ !!

ಮೂಲ್ಕಿ:  ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸಿನ ನಿರ್ವಾಹಕನೊಬ್ಬ ಯುವತಿ ಜತೆ ಅಸಭ್ಯ ವರ್ತಿಸಿದ್ದಕ್ಕಾಗಿ ಪೋಲೀಸರ ಅತಿಥಿಯಾದ ಘಟನೆ ನಿನ್ನೆ ನಡೆದಿದೆ. ಮಂಗಳೂರಿನಿಂದ ಕಿನ್ನಿಗೋಳಿಗೆ ಬರುತ್ತಿದ್ದ ಮರೋಳಿ...

Close