ಯೋಗ್ಯತಾ ಪರೀಕ್ಷೆ ಮತ್ತು ವೃತ್ತಿ ಮಾರ್ಗದರ್ಶನ

ಕಿನ್ನಿಗೋಳಿ: ಎಸ್‌ಎಸ್‌ಎಲ್‌ಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ನಿರ್ಧಾರ ಸೂಚಿಸುವುದೇ ಶೈಕ್ಷಣಿಕ ವೃತ್ತಿ ಮಾರ್ಗದರ್ಶನದ ಉದ್ಧೇಶ. ಯಾವುದೇ ಒತ್ತಡಕ್ಕೆ ಒಳಗಾಗದೇ ತಮ್ಮ ಪ್ರತಿಭೆಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಂಡಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಮಂಗಳೂರು ಸಿ.ಒ.ಡಿ.ಪಿ. ನಿರ್ದೇಶಕ ಫಾ| ಒಸ್ವಾಲ್ಡ್ ಮೊಂತೆರೊ ಹೇಳಿದರು.
ಮಂಗಳೂರು ಸಿ.ಒ.ಡಿ.ಪಿ. ಪ್ರಾಯೋಜಕತ್ವದಲ್ಲಿ ಗುರುವಾರ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಸಭಾಂಗಣದಲ್ಲಿ ನಡೆದ ಕಿನ್ನಿಗೋಳಿ ವಾರಡೊ ಮಟ್ಟದ ಎಸ್.ಎಸ್.ಎಲ್. ಸಿ. ವಿದ್ಯಾರ್ಥಿಗಳ ಯೋಗ್ಯತಾ ಪರೀಕ್ಷೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಮಹತ್ವದ ಕಾಲಘಟ್ಟವಾಗಿದ್ದು, ಕೀಳರಿಮೆಯಿಂದ ಹೊರಬಂದು ಉತ್ತಮ ನಿರ್ಧಾರ ಕೈಗೊಂಡು ಈಗಿನಿಂದಲೇ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಫ್ರೆಡ್ ಜೆ.ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ವಿನೋದ್ ಲೋಬೊ, ಸಿ.ಒ.ಡಿ.ಪಿ. ಸಂಚಾಲಕ ಪ್ಯಾಟ್ರಿಕ್ಸ್ ಬ್ರ್ಯಾಕ್ಸ್, ಕಿನ್ನಿಗೋಳಿ ಐ.ಸಿ.ವೈ.ಎಮ್. ಸಚೇತಕ ಹೆನ್ರಿ ಮಥಾಯಸ್ ಉಪಸ್ಥಿತರಿದ್ದರು.
೬೦ ಮಂದಿ ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.
ಕ್ಯಾಪ್ ಸೆಲ್ ಸಂಯೋಜಕ ಜೋಸೆಫ್ ಕ್ವಾಡ್ರಸ್ ಸ್ವಾಗತಿಸಿ ಪ್ರಸ್ತಾವನೆಗೈದರು. ಜೋಯಲ್ ಮುಲ್ಕಿ ವಂದಿಸಿದರು. ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಕ್ಲಾರನ್ಸ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.

Kinnigoli-08051403

 

Comments

comments

Comments are closed.

Read previous post:
Kinnigoli-08051402
ಹರಿಶ್ಚಂದ್ರ ಪಿ. ಸಾಲ್ಯಾನ್ ರಚಿತ ಕೃತಿ ಬಿಡುಗಡೆ

ಕಿನ್ನಿಗೋಳಿ: ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಹರಿಶ್ಚಂದ್ರ ಪಿ. ಸಾಲ್ಯಾನ್ ರಚಿತ "ಮದು ಮದಿಪು ನುಡಿಕಟ್ಟುಲು" ಕೃತಿಯ ೪ನೇ ಆವೃತ್ತಿಯನ್ನು ಕಟೀಲು ದೇವಳ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ...

Close