ಗುಳೆ ಹೊರಟ ಐಕಳ ನೆಲ್ಲಿಗುಡ್ಡೆ ಕೋರೆ ಕಾರ್ಮಿಕರು

ಕಿನ್ನಿಗೋಳಿ: ಭಾನುವಾರ ಐಕಳ ಗ್ರಾಮ ಪಂಚಾಯಿತಿ ನೆಲ್ಲಿಗುಡ್ಡೆಯ ಕಲ್ಲಿನ ಕೋರೆಯಲ್ಲಿ ಸಂಶಯಾಸ್ಪದ ಭೀಕರ ಸ್ಪೋಟಗೊಂಡು ತಾಯಿ-ಮಗನ ಸಾವಿಗೆ ಕಾರಣವಾದ ಕಪ್ಪು ಕಲ್ಲಿನ ಕೊರೆ ಇದೀಗ ಕಾರ್ಮಿಕರು ಇಲ್ಲದೆ ಬಿಕೋ ಎನ್ನುತ್ತಿದ್ದು ಕಾರ್ಮಿಕರು ಕೆಲಸವನ್ನೇ ಬಿಟ್ಟು ಬೇರೆ ಕಡೆ ಅಥವಾ ಊರಿಗೆ ಹೋಗಿರುವ ಗುಮಾನಿ ಇದೆ.
ಮುಂಜಾರೂಕತೆಯಿಲ್ಲದೆ ಅಲ್ಲದೆ ಜನವಸತಿ ಇರುವಲ್ಲಿ ಸ್ಪೋಟಕ ವಸ್ತುಗಳನ್ನು ದಾಸ್ತಾನು ಇರಿಸಿದ್ದರಿಂದ ಭೀಕರ ಸ್ಪೋಟ ಸಂಭವಿಸಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದರು. ಕೋರೆಯ ಮಾಲಕ ಹಾಗೂ ಮೇಲ್ವಿಚಾರಕನನ್ನು ಪೊಲೀಸರು ಬಂಧಿಸಿದ ನಂತರ ನ್ಯಾಯಾಲಯವು ಜಾಮೀನು ನೀಡಿತ್ತು.
ನೆಲ್ಲಿಗುಡ್ಡೆ ಕೋರೆಯ ಕಾರ್ಮಿಕರ ಕಾಲೋನಿಯಲ್ಲಿ ಒಟ್ಟು 20 ಶೆಡ್‌ಗಳಂತಹ ಮನೆಗಳಿದ್ದು, ಯಾವುದಕ್ಕೂ ಸರಿಯಾದ ಬೀಗವು ಇಲ್ಲ. ಸುರಕ್ಷತ ಕ್ರಮವೂ ಸರಿಯಾಗಿರದೆ ಹೊಟ್ಟೆಪಾಡಿಗೋಸ್ಕರ ದುಡಿಯುತ್ತಿರುವ ಈ ಕಾರ್ಮಿಕರು ಈಗ ಬೇರೆ ಕೋರೆಗಳನ್ನು ಅವಲಂಭಿಸಲಾರಂಬಿಸಿದ್ದಾರೆ. ಕೋರೆಯಲ್ಲಿ ತಮಿಳು ಮೂಲದ ಕಾರ್ಮಿಕರು ಮರಳಿ ತಮ್ಮ ಊರಿಗೆ ತೆರಳಿದ್ದಾರೆ. ಉಳಿದ ಉತ್ತರ ಕರ್ನಾಟಕ ಭಾಗದವರು ಪಕ್ಕದಲ್ಲಿನ ಬೇರೆ ಬೇರೆ ಕೋರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ದಾರುಣವಾಗಿ ಮೃತಪಟ್ಟವರಿಗೆ ಪರಿಹಾರ ಸಿಕ್ಕಿದೆ ಇಲ್ಲವೇ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.
ಈ ಬಗ್ಗೆ ಐಕಳ ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿದಾಗ ಐಕಳದ ಕಲ್ಲಿನ ಕೋರೆಯ ಬಗ್ಗೆ ಸ್ಥಳೀಯರು ಅಧಿಕೃತವಾಗಿ ದೂರು ನೀಡಿಲ್ಲ ಕಳೆದ ಬಾರಿ ಕೋರೆಯೊಂದಕ್ಕೆ ಅತ್ಯಾಧುನಿಕ ದಿನದಲ್ಲಿ ಲೋಡುಗಟ್ಟಲೆ ಜಲ್ಲಿ ಹುಡಿ ಮಾಡುವ ಯಂತ್ರ ಬಂದಾಗ ಐಕಳ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತ ಪಡಿಸಿದಾಗ ಗ್ರಾಮ ಪಂಚಾಯಿತಿ ಗ್ರಾಮಸ್ಥರ ಸಭೆ ನಡೆಸಿ ಏಪ್ರಿಲ್‌ವರೆಗೆ ನಿಯಮಗಳಿಗೆ ಬದ್ಧವಾಗಿ ಅನುಮತಿಯನ್ನು ನೀಡಿದ್ದೇವೆ. ಆ ನಂತರ ಪಂಚಾಯಿತಿ ಮುಖಾಂತರ ಯಾವುದೇ ಲೈಸೆನ್ಸ್ ನವೀಕರಿಸಿಲ್ಲ. ಕೋರೆಯಿಂದ ಹಾನಿ ಆದಲ್ಲಿ ಮಾಲೀಕರೆ ಹೊಣೆ ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.
ಮೃತ ಪಟ್ಟ ತಮಿಳು ಮೂಲದ ಬಡ ಕಾರ್ಮಿಕರಿಗೆ ಪರಿಹಾರ ನೀಡಲು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರು ಯಾವುದೇ ರಾಜಕೀಯ ಬೆರಸದೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಐಕಳ ಗ್ರಾಮಸ್ಥರ ಆಶಯ.

Kinnigoli-09051405

Comments

comments

Comments are closed.

Read previous post:
Kinnigoli-09051403
ಮಳೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಅವ್ಯವಸ್ಥೆ

ಕಿನ್ನಿಗೋಳಿ: ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪಟ್ಟೆ-ಕುದ್ರಿಪದವು ರಸ್ತೆ ಬುಧವಾರ ಹಾಗೂ ಗುರುವಾರ ಎಡೆಬಿಡದೆ ಸುರಿದ ಮಳೆಗೆ ಪೂರ್ಣ ಹದಗೆಟ್ಟಿದೆ. ರಸ್ತೆ ಈ ಮೊದಲು ಕೆಲವು...

Close