ಪಿ.ಯು. ಸಿ ಫಲಿತಾಂಶ

ಕಿನ್ನಿಗೋಳಿ: ಪೊಂಪೈ ಪದವಿ ಪೂರ್ವ ಕಾಲೇಜು ತಾಳಿಪಾಡಿ ಈ ಬಾರಿ ಶೇ. 92.64% ಫಲಿತಾಂಶ ದಾಖಲಿಸಿದ್ದು ಪರೀಕ್ಷೆಗೆ ಹಾಜರಾದ 272 ವಿದ್ಯಾರ್ಥಿಗಳಲ್ಲಿ 252 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 38 ಮಂದಿ ವಿಶಿಷ್ಟ ಶ್ರೇಣಿ, 150 ಮಂದಿ ಪ್ರಥಮ ದರ್ಜೆ, 49 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 98.08%, ಕಲಾ ವಿಭಾಗದಲ್ಲಿ 87.75%, ಹಾಗೂ ವಿಜ್ಞಾನ ವಿಭಾಗದಲ್ಲಿ 83.33% ಫಲಿತಾಂಶ ದಾಖಲಾಗಿದೆ.

ಲಿಟ್ಲ್ ಫ್ಲವರ್ ಪದವಿ ಪೂರ್ವ ಕಾಲೇಜು ಕಿನ್ನಿಗೋಳಿ ಈ ಬಾರಿ ಶೇ. 82.35% ಫಲಿತಾಂಶ ದಾಖಲಿಸಿದ್ದು ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ 56 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 4 ಮಂದಿ ವಿಶಿಷ್ಟ ಶ್ರೇಣಿ, 27 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 96.96%, ಕಲಾ ವಿಭಾಗದಲ್ಲಿ 76.57%, ಫಲಿತಾಂಶ ದಾಖಲಾಗಿದೆ.

 

Comments

comments

Comments are closed.

Read previous post:
ಕಟೀಲು ಪಿ.ಯು..ಸಿ ಫಲಿತಾಂಶ ಶೇ. 95.38%

ಕಿನ್ನಿಗೋಳಿ: ಕಟೀಲು ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜು ಪ್ರತಿ ವರ್ಷದಂತೆ ಈ ಬಾರಿಯೂ ಶೇ. 95.38%  ಫಲಿತಾಂಶ ದಾಖಲಿಸಿದ್ದು ಪರೀಕ್ಷೆಗೆ ಹಾಜರಾದ 368 ವಿದ್ಯಾರ್ಥಿಗಳಲ್ಲಿ 70 ವಿದ್ಯಾರ್ಥಿಗಳು ವಿಶಿಷ್ಟ...

Close