ಸುಸಂಸ್ಕೃತ ಸಮಾಜದ ನಿರ್ಮಾಣ ಆಗಬೇಕು

ಕಿನ್ನಿಗೋಳಿ: ಹೆತ್ತವರು ಪೋಷಕರು ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣದೊಟ್ಟಿಗೆ ಮಾನಸಿಕ ಶಾಂತಿಯನ್ನೀಡುವ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಿಂತನೆಯ ಸಾರಗಳನ್ನು ತಿಳಿಹೇಳಿ ಸುಸಂಸ್ಕೃತ ಸಮಾಜದ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸಬೇಕಾಗಿದೆ. ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ವಡೇರ್ ಹೇಳಿದರು.
ಗುರುವಾರ ಕಿನ್ನಿಗೋಳಿ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ರಾಮ ಜನ್ಮೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.
ಕಿನ್ನಿಗೋಳಿ ಶ್ರೀ ರಾಮ ಮಂದಿರದ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಕಾರ್ಯದರ್ಶಿ ಸುರೇಂದ್ರನಾಥ ವಿ. ಶೆಣೈ, ಸಚ್ಚಿದಾನಂದ ವಿಷ್ಣು ಭಟ್, ಅರ್ಚಕ ಗೀರೀಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-09051401

 

Comments

comments

Comments are closed.

Read previous post:
ಪಿ.ಯು. ಸಿ ಫಲಿತಾಂಶ

ಕಿನ್ನಿಗೋಳಿ: ಪೊಂಪೈ ಪದವಿ ಪೂರ್ವ ಕಾಲೇಜು ತಾಳಿಪಾಡಿ ಈ ಬಾರಿ ಶೇ. 92.64% ಫಲಿತಾಂಶ ದಾಖಲಿಸಿದ್ದು ಪರೀಕ್ಷೆಗೆ ಹಾಜರಾದ 272 ವಿದ್ಯಾರ್ಥಿಗಳಲ್ಲಿ 252 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ....

Close