ಮಳೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಅವ್ಯವಸ್ಥೆ

ಕಿನ್ನಿಗೋಳಿ: ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪಟ್ಟೆ-ಕುದ್ರಿಪದವು ರಸ್ತೆ ಬುಧವಾರ ಹಾಗೂ ಗುರುವಾರ ಎಡೆಬಿಡದೆ ಸುರಿದ ಮಳೆಗೆ ಪೂರ್ಣ ಹದಗೆಟ್ಟಿದೆ. ರಸ್ತೆ ಈ ಮೊದಲು ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ರಸ್ತೆ ಅಭಿವೃದ್ದಿ ಕಾರ್ಯ ಕುಂಠಿತಗೊಂಡಿತ್ತು. ಇದೀಗ ರಸ್ತೆಯು ಸುರಿದ ಮಳೆಯಿಂದಾಗಿ ಕೆಸರು ಕೆಸರಾಗಿ ಜನಸಾಮಾನ್ಯರು ಕೆಸರಿನಲ್ಲಿ ಸಿಲುಕುವಂತಾಗಿದೆ. ಎರಡೇ ದಿನದಲ್ಲಿ ಹಲವಾರು ವಾಹನಗಳು ರಸ್ತೆಯಲ್ಲಿಯೇ ಸಿಲುಕಿಕೊಂಡಿವೆ. ಇದರಿಂದ ರಸ್ತೆಯಲ್ಲಿ ಸಂಚಾರ ಮಾಡುವ ವಾಹನಗಳು, ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಪ್ರಯಾಣಿಕರಿಗೆ ಸಂಚಕಾರ ಬಂದೊಂದಿಗಿದೆ. ಇದೀಗ ಪಟ್ಟೆ ಗ್ರಾಮಸ್ಥರಿಗೆ ಸಂಕಲಕರಿಯಕ್ಕೆ ಹಾಗೂ ಕುದ್ರಿಪದವುವಿಗೆ ಹೋಗಲು ಆಗದೆ ಕೆಸರಿನ ದ್ವೀಪದಲ್ಲಿರುವಂತೆ ಭಾಸವಾಗುತ್ತದೆ. ಸಂಬಂಧಪಟ್ಟ ಇಲಾಖೆ , ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ತ್ವರಿತ ಮುನ್ನಚ್ಚರಿಕೆಯಿಂದ ಅಭಿವೃದ್ದಿ ಕಾರ್ಯವನ್ನು ಮಳೆಗಾಲ ಬರುವುದರ ಒಳಗೆ ಮುಗಿಸದಿದ್ದಲ್ಲಿ ಅಥವಾ ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ಕೃಷಿ ಆಧಾರಿತ ಜೀವನದ ಪಟ್ಟೆ ನಿವಾಸಿಗಳನ್ನು ದಿಗ್ಬಂದನದಲ್ಲಿ ಇರಿಸಿದಂತಾಗಬಹುದು.

Kinnigoli-09051403

Comments

comments

Comments are closed.

Read previous post:
Kinnigoli-09051402
ಸ್ವಾಮಿ ವಿವೇಕಾನಂದ ಸಂಸ್ಥೆ ಉದ್ಘಾಟನೆ

ಕಿನ್ನಿಗೋಳಿ: ಮೇ 10 ಶನಿವಾರದಂದು ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಉದ್ಘಾಟನಾ ಸಮಾರಂಭ ಕಿನ್ನಿಗೋಳಿಯ ರಾಜಾಂಗಣ ಸಭಾಭವನದಲ್ಲಿ ನಡೆಯಲಿದ್ದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಸಂಚಾಲಕ ಡಾ| ಪ್ರಭಾಕರ...

Close