ಕಿನ್ನಿಗೋಳಿ ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಉದ್ಘಾಟನೆ

ಕಿನ್ನಿಗೋಳಿ : ಯುವಜನರು ಹಾಗೂ ಚಾಲನ ತರಬೇತಿ ಪಡೆಯುವವರಿಗೆ ಪ್ರಾಥಮಿಕ ಹಂತದಲ್ಲೇ ವಾಹನ ರಿಪೇರಿ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಯುವ ಸಬಲೀಕರಣಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಶನಿವಾರ ಸಂಜೆ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯ ಲಲಿತಸೌಧದಲ್ಲಿ ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಫಾ| ವಿನೋದ್ ಲೋಬೊ, ಹಾಗೂ ಶಾಂತಿನಗರ ಖತೀಬರು ಹಾಜಿ ಪಿ.ಜೆ ಅಹಮದ್ ಮದನಿ ಶುಭಾಶಂಸನೆಗೈದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಕಿನ್ನಿಗೋಳಿ ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಪ್ರಿನ್ಸಿಪಾಲ್ ಶೋಭಾ ಶಿವಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.
ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿ, ಲಯನ್ಸ್ ವಲಯಾಧ್ಯಕ್ಷ ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

Kinnigoli-11051404 Kinnigoli-11051405Kinnigoli-11051406Kinnigoli-11051407Kinnigoli-11051402

Comments

comments

Comments are closed.

Read previous post:
Kinnigoli-11051409
ತೌಳವ ನಿತ್ಯಾನುಷ್ಠಾನಮ್ ಸಾಕ್ಷ ಚಿತ್ರ ಲೋಕಾರ್ಪಣ

ಕಿನ್ನಿಗೋಳಿ : ಜಪ ತಪ ಪೂಜೆಗಳಿಂದ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಮೌಲ್ಯಯುತ ಜೀವನ, ಸಂಸ್ಕೃತಿ , ಸನಾತನ ವೈದಿಕ ಆಚರಣೆಗಳನ್ನು ಪಾಲಿಸಿದಾಗ ಮಾನಸಿಕ ಜೀವನ ಪಾವನವಾಗಲಿದೆ. ಎಂದು ಪೇಜಾವರ...

Close