ತೌಳವ ನಿತ್ಯಾನುಷ್ಠಾನಮ್ ಸಾಕ್ಷ ಚಿತ್ರ ಲೋಕಾರ್ಪಣ

ಕಿನ್ನಿಗೋಳಿ : ಜಪ ತಪ ಪೂಜೆಗಳಿಂದ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಮೌಲ್ಯಯುತ ಜೀವನ, ಸಂಸ್ಕೃತಿ , ಸನಾತನ ವೈದಿಕ ಆಚರಣೆಗಳನ್ನು ಪಾಲಿಸಿದಾಗ ಮಾನಸಿಕ ಜೀವನ ಪಾವನವಾಗಲಿದೆ. ಎಂದು ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಹೇಳಿದರು
ಕಟೀಲು ನಂದಿನಿ ಬ್ರಾಹ್ಮಣ ಸಭಾ, ಕಟೀಲು ಹಾಗೂ ಸಂಜೀವನಿ ಟ್ರಸ್ಟ್ ಮುಂಬಯಿ ಇವರ ಜಂಟೀ ಆಶ್ರಯದಲ್ಲಿ ಕಟೀಲು ಪದವಿ ಕಾಲೇಜಿನಲ್ಲಿ ವಿಪ್ರ ಸಮಾವೇಶ ಹಾಗೂ ತೌಳವ ನಿತ್ಯಾನುಷ್ಠಾನಮ್ (ಸಾಕ್ಷ ಚಿತ್ರ) ಡಿ.ವಿ.ಡಿ ಲೋಕಾರ್ಪಣ ಸಮಾರಂಭದಲ್ಲಿ ಅಧ್ಯಕ್ಷತೆ ಆಶೀರ್ವಚನ ನೀಡಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧಕರಾದ ಡಾ| ಸಿ. ಆರ್ ಬಳ್ಳಾಲ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ್ ಕಲ್ಕೂರ, ಗಿರಿ ಬಳಗ ಕುಂಜಾರು, ನಾಡೋಕ ಕಿನ್ನಿಕಂಬಳ ಪದ್ಮನಾಭ ರಾವ್ , ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ, ಕಾರ್ಕಳ ಕೋಣಂದೂರು ಗೋಪಾಲಕೃಷ್ಣ ಆಚಾರ್ಯ, ಪಕ್ಷಿಕೆರೆ ಅಂಗಡಿಮಾರ್ ಕೃಷ್ಣ ಭಟ್, ಕೆ. ವಿ. ಕೃಷ್ಣ ಭಟ್ ಕಡಂದಲೆ, ಸಂಶೋಧಕ ಕೆ. ಎಲ್ ಕುಂಡಂತಾಯ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದ ಆಚಾರ್ಯ ಗಾಯತ್ರಿ ಮಂತ್ರದ ಬಗ್ಗೆ ಕೋಲಂಕುಷವಾಗಿ ಮಾಹಿತಿ ನೀಡಿದರು. ವಿ. ಹರಿದಾಸ ಭಟ್ ಅಷ್ಟಾಕ್ಷರಿ- ಸಂಧ್ಯಾವಂದನೆಯ ಪೂರಕ ಮಾಹಿತಿ ನೀಡಿದರು. ವಿ. ಸತ್ಯನಾರಾಯಣ ಆಚಾರ್ಯ ದೇವಪೂಜಾ ಪದ್ಧತಿಯ ಬಗ್ಗೆ ವಿವರ ನೀಡಿದರು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ , ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ , ಅನಂತಪದ್ಮನಾಭ ಆಸ್ರಣ್ಣ , ಕಟೀಲು ದೇವಳದ ಅನುವಂಶಿಕ ತಂತ್ರಿಗಳಾದ ವೇದವ್ಯಾಸ ತಂತ್ರಿ, ಮಂಗಳೂರು ಶರವು ದೇವಳದ ರಾಘವೇಂದ್ರ ಶಾಸ್ತ್ರಿ , ಉಡುಪಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ಡಾ. ನಿ.ಬಿ ವಿಜಯ ಬಳ್ಳಾಲ್, ಶ್ರೀ ಅನೆಗುಡ್ಡೆ ವಿನಾಯಕ ದೇವಳದ ಸೂರ್ಯನಾರಾಯಣ ಉಪಧ್ಯಾಯ ಮೂಳೆ ತಜ್ಞ ಡಾ| ಭಾಸ್ಕರಾನಂದ ಕುಮಾರ್, ಪಾವಂಜೆ ದೇವಳದ ಪಿ. ಕೃಷ್ಣ ಭಟ್, ಶಿಕ್ಷಣ ತಜ್ಞ ಕೆ. ಪಿ. ಆಚಾರ್ಯ, ಕೈಗಾರಿಕೋಧ್ಯಮಿ ಪಿ. ರಾಮದಾಸ ಮಡ್ಮಣ್ಣಾಯ, ಆಗಮ ವಿದ್ವಾಂಸ ಪಂಜ ಭಾಸ್ಕರ ಭಟ್, ಉಜಿರೆ ದೇವಳದ ರಾಘವ ಪಡ್ವೆಟ್ನಾಯ ಉಪಸ್ಥಿತರಿದ್ದರು. ಮುಂಬಯಿ ಸಂಜೀವನಿ ಟ್ರಸ್ಟ್ ಅಧ್ಯಕ್ಷ ಡಾ| ಸುರೇಶ್ ರಾವ್ ಪ್ರಸ್ತಾವನೆಗೈದರು. ಮುಂಬಯಿ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಳದ ಪೆರ್ಣಂಕಿಲ ಹರಿದಾಸ್ ಭಟ್ ಆಶಯ ಭಾಷಣ ಮಾಡಿದರು. ಹರಿನಾರಾಯಣದಾಸ ಆಸ್ರಣ್ಣ ಅಭಿನಂದನಾ ಭಾಷಣಗೈದರು. ಕಟೀಲು ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ| ಶಶಿ ಕುಮಾರ್ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ, ಅಮೃತೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ಮರಾಠೆ ವಂದಿಸಿದರು.

Kinnigoli-11051408Kinnigoli-11051409

Comments

comments

Comments are closed.

Read previous post:
Kinnigoli-11051401
ವಿವೇಕಾನಂದ ಸೇವಾ ಸಂಸ್ಥೆ ಉದ್ಘಾಟನೆ

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಸಮಾಜಮುಖೀ ಸೇವಾ ಕಾರ್ಯಗಳು ನಡೆಸಿ ಯುವ ಜನಾಂಗಕ್ಕೆ ಮಾಲ್ಯಾಧಾರಿತ ಶೈಕ್ಷಣಿಕ ಹಾಗೂ ಕಲೆ ಸಂಸ್ಕೃತಿಗಳ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಗುರುಪುರ...

Close