ವಿವೇಕಾನಂದ ಸೇವಾ ಸಂಸ್ಥೆ ಉದ್ಘಾಟನೆ

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಸಮಾಜಮುಖೀ ಸೇವಾ ಕಾರ್ಯಗಳು ನಡೆಸಿ ಯುವ ಜನಾಂಗಕ್ಕೆ ಮಾಲ್ಯಾಧಾರಿತ ಶೈಕ್ಷಣಿಕ ಹಾಗೂ ಕಲೆ ಸಂಸ್ಕೃತಿಗಳ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಶನಿವಾರ ಕಿನ್ನಿಗೋಳಿ ರಾಜಾಂಗಣ ಸಭಾಭವನದಲ್ಲಿ ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಇಂದಿನ ಯಾಂತ್ರಿಕ ಯುಗದಲ್ಲಿ ಸಮಾಜದಲ್ಲಿ ಆರ್ಥಿಕ ಚಿಂತನೆಯೇ ಮುಖ್ಯವಾಗಿದ್ದು ತ್ಯಾಗ- ಸೇವಾ ಮನೋಭಾವಗಳು ಕಡಿಮೆಯಾಗುತ್ತಿದೆ. ಸ್ವಾಮಿ ವಿವೇಕಾನಂದರ ತ್ಯಾಗ ಹಾಗೂ ಸೇವೆ ನಮಗೆಲ್ಲರಿಗೂ ಆದರ್ಶಪ್ರಾಯ ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಕಾಳಜಿ ಬೆಳೆಸಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸೇವಾ ಸಂಸ್ಥೆಗಳು ಕಾರ್ಯಪ್ರವತ್ತರಾಗಬೇಕು ಎಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಈ ಸಂದರ್ಭ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಅಮರನಾಥ ಶೆಟ್ಟಿ , ಮಾಜಿ ಶಾಸಕ ರುಕ್ಮಯ ಪೂಜಾರಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಟ್ರಸ್ಟಿ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ಡಾ| ಪ್ರದೀಪ್ ಕುಮಾರ್ ಹೆಬ್ರಿ ವಂದಿಸಿದರು. ಎಸ್. ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-11051401Kinnigoli-11051403

Comments

comments

Comments are closed.

Read previous post:
Diya
4th Birthday : Diya Alva

This is your special day. Every second today is for you. After all, it’s your birthday, so let’s hear you...

Close