ಸದೃಡವಾಗಿ ಬೆಳೆದು ನಿಂತ ಭಾಷೆ ತುಳು

ಕಿನ್ನಿಗೋಳಿ : ಜಾಗತೀಕರಣ ಹಾಗೂ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ಪ್ರಭಾವದಿಂದ ಜಗತ್ತಿನ ಹಲವಾರು ತಾಯ್ನುಡಿಗಳು ನಾಮಾವಶೇಷವಾಗುತ್ತಿವೆ. ತುಳು ಬಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ. ಎಂದು ತುಳು ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಹಾಗೂ ವಿಜಯಾ ಕಲಾವಿದರ ಸಹಬಾಗಿತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ನಮ್ಮ ತುಳುನಾಡು ಟ್ರಸ್ಟ್ ವತಿಯಿಂದ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸೋಮವಾರ ನಡೆದ ತುಳಿ ಲಿಪಿ ಕಲಿಕಾ ಕಾರ್ಯಗಾರ ಹಾಗೂ ತುಳುಲಿಪಿ ಎರಡನೇಯ ಆವೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನು ಕರ್ನಾಟಕದ ಕರಾವಳಿಯಿಂದ ಕೇರಳದ ಕಾಸರಗೋಡಿನಲ್ಲೂ ಮಾತಾಡುತ್ತಾರೆ. ದ್ರಾವಿಡ ಭಾಷೆಗಳಲ್ಲಿ ಸದೃಡವಾಗಿ ಬೆಳೆದು ನಿಂತ ಭಾಷೆ ತುಳುವಾಗಿದ್ದು, ಮಲಯಾಳಂ ಅನ್ನು ತುಳು ಲಿಪಿ ಬಳಸಿ ಬರೆಯುತ್ತಾರೆ ಅನ್ನುವುದು ಸೋಜಿಗ ತುಳುನಾಡಿನ ಬ್ರಾಹ್ಮಣರ ಮೂಲಕ ಕೇರಳ ಪ್ರವೇಶಿಸಿದ್ದ ತುಳು ಲಿಪಿ ಮಲಯಾಳಂ ಭಾಷೆಗೆ ಲಿಪಿಯಾಗಿದೆ. ಎಂದು ಹೇಳಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಯಕ್ಷಗಾನ ಕಲಾವಿದ ದಿನೇಶ್ ರೈ ಕಡಬ, ಪಟ್ಟಾಭಿರಾಮ ಚಂದ್ರ, ಜಿ.ವಿ.ಎಸ್. ಉಳ್ಳಾಲ್, ವಿಜಯ ಕಲಾವಿದರ ತಂಡದ ಸೀತಾರಾಮ ಶೆಟ್ಟಿ ಎಳತ್ತೂರು ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸುಧಾಕರ್ ಉಳ್ಳಾಲ ವಂದಿಸಿದರು.

Kinnigoli-12051414

Comments

comments

Comments are closed.

Read previous post:
Kinnigoli-12051413
ಪುನರೂರು ರಾಶಿ ಪೂಜೆ : ಮುಷ್ಠಿಕಾಣಿಕೆ

ಕಿನ್ನಿಗೋಳಿ :  ಮೇ 16 ರಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಡೆಯಲಿರುವ ರಾಶಿ ಪೂಜೆಯ ಪ್ರಯುಕ್ತ ಸೋಮವಾರ ಬೆಳಿಗ್ಗೆ ಶ್ರೀರಸ್ತು ಮುಹೂರ್ತ, ಮುಷ್ಠಿ ಕಾಣಿಕೆ ನಡೆಯಿತು. ದೇವಳದ ಧರ್ಮದರ್ಶಿ...

Close