ನಳಿನ್ ಕುಮಾರ್ ಕಟೀಲಿಗೆ ಭೇಟಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಬುಧವಾರ ಸಂಸದ ನಳಿನ್ ಕುಮಾರ್ ಕಟೀಲ್ ಪತ್ನಿ ಶ್ರೀದೇವಿ ಹಾಗೂ ಪುತ್ರಿಯರ ಸಮೇತರಾಗಿ ಕಟೀಲು ದೇವಿಯ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು. ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ ಕಮಲದೇವಿ ಪ್ರಸಾದ ಆಸ್ರಣ್ಣ, ಪ್ರಸಾದ ನೀಡಿದರು
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮೇ 16 ರಂದು ಪ್ರಕಟವಾಗುವ ಫಲಿತಾಂಶದಲ್ಲಿ ನನಗೆ ಗೆಲುವು ಸಿಗಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ ಎಂದು ಹೇಳಿದರು.
ಇತ್ತೀಚೆಗೆ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳು ಮಾಧ್ಯಮದಲ್ಲಿ ಹರಿದಾಡುತ್ತದೆ. ಇಂದಿನ ಸ್ವಾರ್ಥ ರಾಜಕೀಯದಲ್ಲಿ ಅಪಪ್ರಚಾರ ಸಾಮಾನ್ಯ ಆದರೆ ಈ ರೀತಿಯ ಅಪಪ್ರಚಾರ ಸಲ್ಲದು. ಹೀನ ರಾಜಕೀಯ ಮಾಡಬಾರದು. ಎಲ್ಲಾ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯೇ ಉತ್ತರ ಕೊಡುತ್ತಾರೆ.
ಕಳೆದ ಸಲದ ಚುನಾವಣೆ ಸಂದರ್ಭದಲ್ಲಿ ಕೂಡಾ ಚುನಾವಣೆ ಸಮೀಕ್ಷೆಗಳು ನನ್ನ ವಿರುದ್ದವಾಗಿದ್ದರೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇನೆ. ರಾಜ್ಯದಲ್ಲಿ ಸಂಸದನಾಗಿ ಒಂದನೇ ಸ್ಥಾನ ದೇಶದಲ್ಲಿ ಆರನೇ ಸ್ಥಾನ ಪಡೆದ ನಳಿನ್ ಕುಮಾರ್ ಯಾರೆಂಬುದು ಜನತೆಗೆ ಗೊತ್ತಿದೆ.
ನರೇಂದ್ರ ಮೋದಿಯ ಅಲೆ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಯುವಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಅಲ್ಲದೆ ದೇಶದಲ್ಲಿಯೇ ಹೆಚ್ಚಿನ ಮತದಾನ ಆಗಿದ್ದು ಭಾರತೀಯ ಜನತಾ ಪಾರ್ಟಿಯ ಗೆಲುವಿಗೆ ಪೂರಕವಾಗಲಿದೆ ಎಂದು ಹೇಳಿದರು.

KInnigoli-14051402 KInnigoli-14051403

Comments

comments

Comments are closed.

Read previous post:
KInnigoli-14051401
ವೇದ ಪಾಠ ಶಿಬಿರ ಸಮಾರೋಪ

ಕಿನ್ನಿಗೋಳಿ : ಪುನರೂರು ದೇವಳ ಹಾಗೂ ವಿಪ್ರಸಂಪದ ಪುನರೂರು ಆಶ್ರಯದಲ್ಲಿ ನಡೆಯುವ ವೇದ ಪಾಠ ಶಿಬಿರದ ಸಮಾರೋಪ ಸಮಾರಂಭ ಗುರುವಾರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ನಡೆಯಿತು. ದೇವಳದ...

Close