ಶ್ರೀ ಚಂದ್ರಶೇಖರ ಸ್ವಾಮೀಜಿ : ಬೃಹತ್ ಹೊರೆ ಕಾಣಿಕೆ

ಮೂಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ.16 ಮತ್ತು 17ರಂದು ಭಾರೀ ಶ್ರದ್ಧಾ ಭಕ್ತಿಯಿಂದ ನಡೆಯಲಿರುವ ರಾಶಿ ಪೂಜಾ ಮಹೋತ್ಸವಕ್ಕೆ ಮೂಲ್ಕಿಯ ಗೇರುಕಟ್ಟೆಯಲ್ಲಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯ ಆಶ್ರಮದಿಂದ ಗುರುವಾರ ಬೃಹತ್ ಹೊರೆ ಕಾಣಿಕೆಯ ಮೆರವಣಿಗೆಗೆ ಅಂತರಾಷ್ಟ್ರೀಯ ವೈಜ್ಞಾನಿಕ ವಾಸ್ತುತಜ್ಞರು, ಆಧ್ಯಾತ್ಮಿಕ ಗುರು, ಖ್ಯಾತ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಚಾಲನೆ ನೀಡಿದರು.

ಪುನರೂರು ವಿಶ್ವನಾಥ ದೇವಳ ಹಾಗೂ ಜ್ಯೋತಿಷ್ಯರತ್ನ ಗೋವಿಂದ ಭಟ್‌ರವರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು ಇದೇ ಅಭಿಮಾನದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ತಮ್ಮ ಆಶ್ರಮದ ಮೂಲಕ ಈ ಹೊರೆ ಕಾಣಿಕೆಯನ್ನು ಅರ್ಪಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಹಿರಿಯ ಜ್ಯೋತಿಷ್ಯರತ್ನ ಗೋವಿಂದ ಭಟ್ ಹಾಗೂ ಶಾರದಮ್ಮ ದಂಪತಿಗಳು, ಶಾಸಕ ಮೊಯ್ದಿನ್ ಬಾವ, ಬೆಳಪುವಿನ ದೇವಿಪ್ರಸಾದ ಶೆಟ್ಟಿ, ಗ್ಲೋಬ್‌ಕಾಮ್ ಗ್ರೂಪ್ಸ್‌ನ ಅಧ್ಯಕ್ಷ ನವೀನ್ ಕುಮಾರ್, ಹಿರಿಯ ಪೊಲೀಸ್ ಅಧಿಕಾರಿ ವೆಂಕಟೇಶ ಪ್ರಸನ್ನ, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಠೇಲ್ ವೆಂಕಟೇಶ್ ರಾವ್, ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ರೋಶ್‌ನಿ ಸಿ.ಭಟ್, ರಾಹುಲ್ ಸಿ. ಭಟ್, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಆಶ್ರಮದ ಸಂಚಾಲಕರಾದ ಮಧು ಆಚಾರ್ಯ ಕಾರ್ನಾಡು ಹಾಗೂ ಗಿರೀಶ್ ಕಾಮತ್ ಮೂಲ್ಕಿ ಇನ್ನಿತರರು ಉಪಸ್ಥಿತರಿದ್ದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಗೇರುಕಟ್ಟೆಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದಿಂದ ಪುನರೂರು ವಿಶ್ವನಾಥ ದೇವಸ್ಥಾನಕ್ಕೆ ನಡೆದ ಮೆರವಣಿಗೆಯಲ್ಲಿ ವಿವಿಧ ವಾದ್ಯಗೋಷ್ಠಿಗಳ ಜೊತೆಯಲ್ಲಿ ವಿವಿಧ ವಾಹನಗಳು ಹಾಗೂ ವೇಷಭೂಷಣಗಳು ವಿಶೇಷ ಆಕರ್ಷಣೆ ಪಡೆದಿತ್ತು. ಪೂಜ್ಯ ಸ್ವಾಮೀಜಿಯ ಭಕ್ತರು ಹಾಗೂ ಆಶ್ರಮದ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪುನರೂರು ದೇವಳದಲ್ಲಿ ರಾಶಿ ಪೂಜಾ ಸಮಿತಿಯವರು ಮೆರವಣಿಗೆಯನ್ನು ಆತ್ಮೀಯವಾಗಿ ಸ್ವಾಗತಿಸಿದರು.

Kinnigoli-16051401

 

Comments

comments

Comments are closed.

Read previous post:
KInnigoli-14051402
ನಳಿನ್ ಕುಮಾರ್ ಕಟೀಲಿಗೆ ಭೇಟಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಬುಧವಾರ ಸಂಸದ ನಳಿನ್ ಕುಮಾರ್ ಕಟೀಲ್ ಪತ್ನಿ ಶ್ರೀದೇವಿ ಹಾಗೂ ಪುತ್ರಿಯರ ಸಮೇತರಾಗಿ ಕಟೀಲು ದೇವಿಯ ಆಶೀರ್ವಾದ ಪಡೆದು ಪ್ರಸಾದ...

Close