ನಳಿನ್ ಕುಮಾರ್ ಕಟೀಲಿಗೆ ಭೇಟಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಶುಕ್ರವಾರ ದಕ್ಷಿಣ ಕನ್ನಡ ಲೋಕಸಭಾ ವಿಜೇತ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕುಟಂಬ ಸಮೇತರಾಗಿ ಬೇಟಿ ನೀಡಿ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣೆ ಸಮೀಕ್ಷೆಗಳು ನನ್ನ ವಿರುದ್ದವಾಗಿದ್ದರೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇನೆ. ನರೇಂದ್ರ ಮೋದಿಯ ಅಲೆ ಹಾಗೂ ಕಾರ್ಯಕರ್ತರ ಪರಿಶ್ರಮ ಅಲ್ಲದೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಿದ್ದು ಭಾರತೀಯ ಜನತಾ ಪಾರ್ಟಿಯ ಅಭಿವೃದ್ದಿಪರ ಪಾರದರ್ಶಕ ಚಿಂತನೆ ಅಭೂತಪೂರ್ವ ಗೆಲುವಿಗೆ ಪೂರಕವಾಗಿತ್ತು ಎಂದು ಹೇಳಿದರು.
ಕಟೀಲು ದೇವಳದ ಹಲವಾರು ಅಭಿವೃದ್ಧಿ ಕೆಲಸಗಳು ಹಾಗೂ ಈ ಹಿಂದೆ ಮಾಡಿದ ಮಾಸ್ಟರ್ ಪ್ಲಾನ್‌ಗೆ ಮತ್ತೆ ತ್ವರಿತವಾಗಿ ಚಾಲನೆ ನೀಡಲಾಗುವುದು. ಗ್ರಾಮಾಂತರ ಸೌಲಭ್ಯಕ್ಕೆ ಹೆಚ್ಚು ಒತ್ತು ಕೊಡುವುದು, ಕೃಷಿಯಾಧರಿತ ಕೈಗಾರಿಕೆಗಳು, ಐಟಿ ಪಾರ್ಕ್, ಪರಿಸರ ಸ್ನೇಹಿ ಜಲವಿದ್ಯುತ್ ಯೋಜನೆ ಮಂಗಳೂರು ವಿಮಾನನಿಲ್ದಾಣ, ರೈಲ್ವೇ ವಿಭಾಗಗಳ ಉನ್ನತೀಕರಣದ ಬಗ್ಗೆ ಶ್ರಮಿಸುವುದಾಗಿ ಹೇಳಿದರು. ಎಂದು ಹೇಳಿದರು. ಎಂದು ಹೇಳಿದರು.
ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಪ್ರಸಾದ , ಮೊಕ್ತೇಸರ ವಾಸುದೇವ ಆಸ್ರಣ್ಣ , ಲಕ್ಷ್ಮೀನಾರಾಯಣ ಆಸ್ರಣ್ಣ , ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು.
ದ.ಕ. ಜಿಲ್ಲಾ ಮುಖಂಡರಾದ ಪ್ರತಾಪ ಸಿಂಹನಾಯಕ, ಜಗದೀಶ ಅಧಿಕಾರಿ, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಈಶ್ವರ್ ಕಟೀಲ್, ಜನಾರ್ದನ ಗೌಡ, ದಿನೇಶ್ ಪುತ್ರನ್, ಜನಾರ್ದನ ಕಿಲೆಂಜೂರು, ಭಾಸ್ಕರ ದೇವಸ್ಯ, ನಿಡ್ಡೋಡಿ ಛಾವಡಿ ಮನೆ ಜಗನ್ನಾಥ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ಅರುಣ್ ಕುಮಾರ್, ಸಚಿನ್ ಶೆಟ್ಟಿ , ಭಾಸ್ಕರ ಉಲ್ಲಂಜೆ , ಕೇಶವ, ಗುರುರಾಜ ಮಲ್ಲಿಗೆಯಂಗಡಿ ಜಿಲ್ಲೆಯ ಹಾಗೂ Pತ್ರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Kinnigoli-16051415 Kinnigoli-16051416 Kinnigoli-16051417 Kinnigoli-16051418 Kinnigoli-16051419 Kinnigoli-16051420

Comments

comments

Comments are closed.

Read previous post:
Kinnigoli-16051414
ಪುನರೂರು ದೇವಳ ರಾಶಿ ಪೂಜಾ ಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಶುಕ್ರವಾರ ರಾಶಿ ಪೂಜಾ ಮಹೋತ್ಸವ ನಡೆಯಿತು. ರಾಶಿಕಲಶಾಧಿವಾಸ, ಭಾರತೀ ಪೂಜೆ , ಸಂಕಲ್ಪ , ಹರಿನಾಮ ಸಂಕೀರ್ತನೆ,...

Close