ಗ್ರಾಮೀಣ ಪ್ರದೇಶಗಳಲ್ಲಿ ಕಲೆಗೆ ಪ್ರೋತ್ಸಾಹ ಅಗತ್ಯ

ಕಿನ್ನಿಗೋಳಿ: ಕಲೆಗಳಿಗೆ ಗ್ರಾಮೀಣ ಮಟ್ಟದಲ್ಲಿ ಪ್ರೋತ್ಸಾಹ ಮಾರ್ಗದರ್ಶನ ನೀಡಿದಾಗ ಯಕ್ಷಗಾನ ಹಾಗೂ ಜಾನಪದ ಕಲೆಗಳು ಜೀವಂತಿಕೆ ಕಂಡುಕೊಳ್ಳುತ್ತದೆ. ಎಂದು ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಕೆರೆಕಾಡು ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ ನೃತ್ಯ ಕಾರ‍್ಯಾಗಾರದ ಸಮಾರೋಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಯುವ ಕಲಾವಿದ ಪ್ರಸಾದ ಚೇರ್ಕಾಡಿ ಬೆಂಗಳೂರು ಅವರನ್ನು ಮೇಳದ ವತಿಯಿಂದ ಸನ್ಮಾನಿಸಲಾಯಿತು.
ಕೆರೆಕಾಡು ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ ಹಿತೈಷಿ ರವಿ ಭಟ್, ಕಾರ್ಯದರ್ಶಿ ರೇಶ್ಮಾ ಬಂಗೇರ, ಸಂದ್ಯಾ, ಪ್ರೇಮಲತ,ಗಣೇಶ ಬಂಗೇರ, ತಾರಾನಾಥ ಶೆಟ್ಟಿಗಾರ,ಅಶೋಕ,ಪ್ರವೀಣ ಶೆಟ್ಟಿ ಉಪಸ್ಥಿತರಿದ್ದರು.
ಮಕ್ಕಳಮೇಳದ ಅಧ್ಯಕ್ಷ ಜಯಂತ ಅಮೀನ್ ಸ್ವಾಗತಿಸಿ, ಬಾಲ ಕಲಾವಿದ ಅಜಿತ್ ವಂದಿಸಿದರು. ಕಲಾವಿದ ಅಭಿಜಿತ್ ಜೆ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-20051401

Comments

comments

Comments are closed.

Read previous post:
Kinnigoli-17051401
ಕಿನ್ನಿಗೋಳಿ ಪರಿಸರ ಬಿಜೆಪಿ ವಿಜಯೋತ್ಸವ

ಪಕ್ಷಿಕೆರೆ ಬಿಜೆಪಿ  ವಿಜಯೋತ್ಸವ ಪುನರೂರು ಬಿಜೆಪಿ  ವಿಜಯೋತ್ಸವ    

Close