ಕಮ್ಮಾಜೆ- ಕಲ್ಲಕುಮೇರು ರಸ್ತೆ

ಕಿನ್ನಿಗೋಳಿ: ಕಮ್ಮಾಜೆ ಮೊರಾರ್ಜಿ ಶಾಲೆಯ ಮೂಲಕ ಸಾಗುವ ಕಲ್ಲಕುಮೇರು ರಸ್ತೆ ಅಕ್ರಮ ಗಣಿಗಾರಿಕೆಯಿಂದ ನಲುಗಿ ಹೋಗುತ್ತಿದೆ ಎನ್ನುವುದಕ್ಕೆ ಇಲ್ಲಿನ ರಸ್ತೆಯೇ ಸಾಕ್ಷಿ. ರಾಜ್ಯ ಹೆದ್ದಾರಿ ಕಿನ್ನಿಗೋಳಿ -ಮೂಡಬಿದ್ರೆಯ ಕಮ್ಮಾಜೆ ತಿರುವಿನಲ್ಲಿ ಬಲಕ್ಕೆ ತಿರುಗಿದರೆ ಮೊರಾರ್ಜಿ ಶಾಲೆಗೆ ಹೋಗುತ್ತದೆ. ಅಲ್ಲಿಂದ ಮುಂದೆ ಕಲ್ಲಕುಮೇರಿಗಾಗಿ ಕಟೀಲಿಗೂ ಹೋಗಬಹುದು. ಕಳೆದ ಹಲವಾರು ವರ್ಷಗಳು ಸಂದರೂ ಈ ರಸ್ತೆಗೆ ಇನ್ನೂ ಡಾಮರೀಕರಣವಾಗಿಲ್ಲ. ಡಾಮರೀಕರಣ ನಡೆದರೂ ಅದು ನೆಟ್ಟಗೆ ನಿಲ್ಲುವುದೂ ಇಲ್ಲ ಎಂಬುದು ಸ್ಥಳೀಯರ ಮಾತು. ಅಕ್ರಮ ಗಣಿಗಾರಿಕೆಗೆ ರಸ್ತೆ ಪೂರಾ ಹಾಳಾಗಿದ್ದು ಜಲ್ಲಿ ಕಲ್ಲಿನ ಪಳೆಯುಳಿಕೆಗಳು ಗೋಚರಿಸುತ್ತಿದೆ. ಗಣಿಗಾರಿಕೆಯ 2-3 ಕಲ್ಲಿನ ಕೋರೆಗಳದ್ದು ನಿಯಮಗಳನ್ನು ಉಲ್ಲಂಘಿಸಿ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ. ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಎಷ್ಟೋ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದಾರೂ ಪಂಚಾಯಿತಿ ಸುಮ್ಮನೆ ಕುಳಿತಿದೆ. ಗಣಿಗಾರಿಕೆಯಿಂದ ಶಾಲಾ ಮಕ್ಕಳಿಗೂ ತೊಂದರೆಯಾಗಿದ್ದು ಟಿಪ್ಪರುಗಳ ಹಾರಾಟದಿಂದ ಜೀವ ಭಯದಿಂದ ಬದುಕುತ್ತಿದ್ದಾರೆ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ಸಾಗುವುದಂತೂ ಅಪಾಯಕಾರಿಯಾಗಿದೆ. ಒಂದೆಡೆ ಬೆಳೆದು ನಿಂತಿರುವ ಕಾಡು,ಇನ್ನೊಂದೆಡೆ ದಾರಿದೀಪವಿಲ್ಲದೆ ರಸ್ತೆ, ಚರಂಡಿ ಎಲ್ಲಿ ಇದೆ ಎಂದು ಗೊತ್ತಾಗುತ್ತಿಲ್ಲ. ಮಳೆ ಬಂದರಂತೂ ರಸ್ತೆಯಲ್ಲೇ ನೀರು ಹರಿಯುತ್ತಿರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಕಳೆದ ವಾರದ ಹಿಂದೆ ಐಕಳ ಗ್ರಾಮಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ ಅಕ್ರಮ ಕೋರೆಯಲ್ಲಿ ಸ್ಪೋಟ ಸಂಭವಿಸಿ ಎರಡು ಮುಗ್ದ ಜೀವಗಳು ಬಲಿಯಾದ್ದರೂ ಮೌನಿಯಾಗಿದ್ದ ಸಚಿವರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕೋರೆಗಳನ್ನು ನಿಲ್ಲಿಸಿ ರಸ್ತೆ ದುರಸ್ಥಿ ಮಾಡಲು ಸ್ಥಳೀಯ ಶಾಸಕರು ಹಾಗೂ ಸಚಿವರು ಮುಂದಾಗುವರೇ ಕಾದು ನೋಡಬೇಕಿದೆ. ಸಚಿವರ ಕ್ಷೇತ್ರ ವ್ಯಾಪ್ತಿಯಲ್ಲಿ ಡಾಮರೀಕರಣವಾಗದೆ ಇರುವ ರಸ್ತೆಗಳಲ್ಲಿ ಇದು ಒಂದು ಸ್ಯಾಂಪಲ್ ಅಷ್ಟೇ ಇಂತಹ ಇನ್ನೆಷ್ಟೋ ರಸ್ತೆಗಳು ಡಾಮರೀಕರಣವಾಗದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

Kinnigoli-22051401

Comments

comments

Comments are closed.

Read previous post:
Kinnigoli-20051402
ಐಕಳದಲ್ಲಿ ಚಿರತೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಡಿಕಲ್ಲು ಪುತ್ತುಕೋಡಿ ಬಳಿ ಸೋಮವಾರ ಮಧ್ಯಾಹ್ನ ಚಿರತೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಉಂಟುಮಾಡಿತು. ವಿಷಯ ತಿಳಿದು...

Close