ಮುಕ್ಕ ಸೋಟ್ಸ್ ಕ್ಲಬ್ ತಂಡಕ್ಕೆ ಸುಬ್ರಹ್ಮಣ್ಯ ಟ್ರೋಫಿ -2014

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸೋಟ್ಸ್ ಕ್ಲಬ್ ವತಿಯಿಂದ ತೋಕೂರು ಬೂಬ ದೇವಾಡಿಗ ಸ್ಮರಣಾರ್ಥ 25 ನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಮುಕ್ಕ ಸೋಟ್ಸ್ ಕ್ಲಬ್ ತಂಡವು ಸುಬ್ರಹ್ಮಣ್ಯ ಟ್ರೋಫಿ -2014 ಸಹಿತ 10,001ನಗದು ಬಹುಮಾನ ಹಾಗೂ ಇಂದಿರಾನಗರ ತಂಡ 6001 ನಗದು ಸಹಿತ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ರಾಮಣ್ಣ ದೇವಾಡಿಗ ಮುಂಬಯಿ ಬಹುಮಾನ ವಿತರಿಸಿದರು.
ತೋಕೂರು ಎಂ. ಆರ್ ಪೂಂಜಾ ಐ.ಟಿ. ಐ ಸಂಸ್ಥೆ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್, ಪಿ. ಪಿ. ಅಬ್ದುಲ್ ಕರೀಮ್, ತೋಕೂರು ಉರ್ದು ಶಾಲಾ ಶಿಕ್ಷಕ ಮಹ್ಮದ್ ಹುಸೇನ್, ಗಣಪತಿ ಆಚಾರ್ಯ, ಯೋಗೀಶ್ ಕೋಟ್ಯಾನ್, ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ, ಸಂತೋಷ್ ದೇವಾಡಿಗ, ಸುರೇಶ್ ಶೆಟ್ಟಿ , ಪ್ರಶಾಂತ್ ಕುಮಾರ್ ಬೇಕಲ್ ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾಟವನ್ನು ರಮೇಶ್ ದೇವಾಡಿಗ ಹಾಗೂ ಮೋಹನ್ ಕುಮಾರ್ ಉದ್ಘಾಟಿಸಿದ್ದರು.

Comments

comments

Comments are closed.

Read previous post:
Kinnigoli-22051401
ಕಮ್ಮಾಜೆ- ಕಲ್ಲಕುಮೇರು ರಸ್ತೆ

ಕಿನ್ನಿಗೋಳಿ: ಕಮ್ಮಾಜೆ ಮೊರಾರ್ಜಿ ಶಾಲೆಯ ಮೂಲಕ ಸಾಗುವ ಕಲ್ಲಕುಮೇರು ರಸ್ತೆ ಅಕ್ರಮ ಗಣಿಗಾರಿಕೆಯಿಂದ ನಲುಗಿ ಹೋಗುತ್ತಿದೆ ಎನ್ನುವುದಕ್ಕೆ ಇಲ್ಲಿನ ರಸ್ತೆಯೇ ಸಾಕ್ಷಿ. ರಾಜ್ಯ ಹೆದ್ದಾರಿ ಕಿನ್ನಿಗೋಳಿ -ಮೂಡಬಿದ್ರೆಯ...

Close