ಸಿಮೆಂಟ್ ಮಿಕ್ಸರ್ ಲಾರಿ ಪಲ್ಟಿ

ಕಿನ್ನಿಗೋಳಿ:  ಕಿನ್ನಿಗೋಳಿ, ಮೂಡಬಿದ್ರೆ ರಾಜ್ಯ ಹೆದ್ದಾರಿಯ ಐಕಳ ಕಂಬಳಕ್ಕೆ ಹೋಗುವ ದಾರಿಯ ತಿರುವು ರಸ್ತೆ ಬಳಿ ಸಿಮೆಂಟ್ ಮಿಕ್ಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು, ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಶುಕ್ರವಾರ ಬೆಳಿಗ್ಗಿನ ಜಾವ ಸಂಭವಿಸಿದೆ.
ಅಫಘಾತ ವಲಯವೆಂದು ಗುರುತಿಸಲ್ಪಟ್ಟ ಐಕಳ ತಿರುವಿನಲ್ಲಿ ಈಗಾಗಲೇ ಹಲವಾರು ಅಪಘಾತಗಳು ನಡೆದಿದ್ದು ಲೋಕೋಪಯೋಗಿ ಇಲಾಖೆ ಇದರ ಬಗ್ಗೆ ಸೂಕ್ತ ಗಮನ ಕೊಡಬೇಕಾಗಿದೆ, ಎಂಬುದು ಸ್ಥಳೀಯರ ಅಹವಾಲು. ಇಲ್ಲಿನ ರಸ್ತೆ ಅಗಲ, ಬದಿಯಲ್ಲಿ ಬೆಳೆದ ಗಿಡಗಂಟಿಗಳನ್ನು ಕಡಿದು ಸೂಕ್ತ ಚರಂಡಿಯ ವ್ಯವಸ್ಥೆ ಮಳೆಗಾಲದೊಳಗೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Kinnigoli-23051404 Kinnigoli-23051401 Kinnigoli-23051402 Kinnigoli-23051403

Comments

comments

Comments are closed.

Read previous post:
Kinnigoli-25051407
ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹ್ಮಮ್ಮಾಯಿ ದೇವಳದಲ್ಲಿ ಮೇ. 25 ಭಾನುವಾರ ದೇವಳದ ಪ್ರತಿಷ್ಠಾ ವರ್ಧಂತಿ, ಚಂಡಿಕ ಯಾಗ, ಮಹಾಪೂಜೆ, ಉಚಿತ ಸಾಮೂಹಿಕ ವಿವಾಹ, ಮಹಾ...

Close