ಪ್ರತಿಷ್ಠಾ ವರ್ಧಂತಿ ಹಾಗೂ ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹ್ಮಮ್ಮಾಯಿ ದೇವಳದಲ್ಲಿ ಮೇ. 25 ಭಾನುವಾರ ದೇವಳದ ಪ್ರತಿಷ್ಠಾ ವರ್ಧಂತಿ, ಚಂಡಿಕ ಯಾಗ, ಮಹಾಪೂಜೆ, ಉಚಿತ ಸಾಮೂಹಿಕ ವಿವಾಹ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದೈವಗಳ ನೇಮ ನಡೆಯಲಿದೆ. ಸಾಮೂಹಿಕ ವಿವಾಹವನ್ನು ಅಪರಾಹ್ನ ಅಭಿಜಿನ್ ಸುಮುಹೂರ್ತದಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ನೆರವೇರಿಸಲಾಗುವುದು. ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮುಂಬೈ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಮುಂದಾಳುತನದಲ್ಲಿ ದೇಂದಡ್ಕ ರಾಮಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ ಎಂದು ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kinnigoli-25051407 Kinnigoli-25051408

Comments

comments

Comments are closed.

Read previous post:
ಮುಕ್ಕ ಸೋಟ್ಸ್ ಕ್ಲಬ್ ತಂಡಕ್ಕೆ ಸುಬ್ರಹ್ಮಣ್ಯ ಟ್ರೋಫಿ -2014

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸೋಟ್ಸ್ ಕ್ಲಬ್ ವತಿಯಿಂದ ತೋಕೂರು ಬೂಬ ದೇವಾಡಿಗ ಸ್ಮರಣಾರ್ಥ 25 ನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಮುಕ್ಕ ಸೋಟ್ಸ್ ಕ್ಲಬ್ ತಂಡವು ಸುಬ್ರಹ್ಮಣ್ಯ...

Close