ಮೌಲ್ಯಭರಿತ ಕುಟುಂಬ ಜೀವನ ಪದ್ಧತಿ

ಕಿನ್ನಿಗೋಳಿ: ಮೌಲ್ಯಭರಿತ ಕುಟುಂಬ ಜೀವನ ಪದ್ಧತಿ ಮತ್ತು ಸಂಬಂಧಗಳು ಗಟ್ಟಿಯಾದರೆ ಸಮಾಜವೂ ಸುಧಾರಣೆಯಾಗುತ್ತದೆ. ಯುವಪೀಳಿಗೆ ಸನ್ಮಾರ್ಗದಲ್ಲಿ ಮುನ್ನಡೆಯಲು ಮಹಿಳೆಯರು ತಮ್ಮ ಮಕ್ಕಳನ್ನು ಎಳವೆಯಲ್ಲಿಯೇ ಶಿಸ್ತು, ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕಾದ ಅವಶ್ಯಕತೆಯಿದೆ ಎಂದು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಅಧ್ಯಕ್ಷ ಶಂಕರ ಶೆಟ್ಟಿಗಾರ್ ಬೆಳ್ಳಾಯರು ಹೇಳಿದರು.
ಭಾನುವಾರ ಹಳೆಯಂಗಡಿ ಸಮೀಪದ ಕಲ್ಲಾಪು ಮಹಿಳಾ ವೇದಿಕೆಯ ರಜತ ಮಹೋತ್ಸವ, ವಾಚನಾಲಯದ 52ನೇ ವಾರ್ಷಿಕ ಮಹಾಸಭೆ ಹಾಗೂ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉಚಿತ ಪುಸ್ತಕಗಳ ವಿತರಣೆ ಹಾಗೂ ವೀರಭದ್ರ ಸಭಾಭವನಕ್ಕೆ ವಧುವರರ ಆಸನಗಳ ಕೊಡುಗೆಗಳನ್ನು ನೀಡಲಾಯಿತು.
ಕಲ್ಲಾಪು ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಲಲಿತಾ ಕೇಶವ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕೊಲಾ ಸರಕಾರಿ ಫ್ರೌಢ ಸಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಹಂತ್ಲಾಜೆ, ಬೆಸೆಂಟ್ ಪದವಿ ಪೂರ್ವ ಕಾಲೇಜು ಅಧೀಕ್ಷಕ ಹರಿಶ್ಚಂದ್ರ ಉದ್ಯಾವರ, ಉಪನ್ಯಾಸಕಿ ಭಾನುಮತಿ ಡಿ. ಶೆಟ್ಟಿಗಾರ್, ಸುರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವಿಜಯ ಲಕ್ಷ್ಮಿ ಶೆಟ್ಟಿಗಾರ್, ಕಲ್ಲಾಪು ವಾಚನಾಲಯ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿಗಾರ್, ಕೋಶಾಧಿಕಾರಿ ರಾಮಚಂದ್ರ ಟಿ. ಸಾಗು, ಲೆಕ್ಕಪರಿಶೋಧಕರಾದ ಕಾಂತಣ್ಣ ಗುರಿಕಾರ, ಶೇಖರ್ ಡಿ. ತೋಕೂರು, ಮಹಿಳಾ ವೇದಿಕೆ ಉಪಾಧ್ಯಕ್ಷೆ ಶಾಂತಿ ಎಸ್. ತೋಕೂರು, ಜೊತೆ ಕಾರ್ಯದರ್ಶಿ ಸುಜಾತ ಪಿ. ದೇವರೊಕ್ಲು, ಕೋಶಾಧಿಕಾರಿ ಶೋಭಾ ವಿ ಕಲ್ಲಾಪು ಉಪಸ್ಥಿತರಿದ್ದರು.
ಮಹಿಳಾ ವೇದಿಕೆ ಅಧ್ಯಕ್ಷೆ ವಿಪುಲ ಡಿ. ತೋಕೂರು ಸ್ವಾಗತಿಸಿದರು. ವಾಚನಾಲಯ ಪ್ರದಾನ ಕಾರ್ಯದರ್ಶಿ ರಾಘವೇಂದ್ರ ಟಿ. ಎಸ್. ಕಲ್ಲಾಪು ವಾಚನಾಲಯದ ವರದಿ ವಾಚಿಸಿದರು. ಮಹಿಳಾ ವೇದಿಕೆ ಪ್ರಧಾನ ಕಾರ್ಯದರ್ಶಿ ಜ್ಯೋತಿ ಆರ್. ಕಲ್ಲಾಪು ಮಹಿಳಾ ವೇದಿಕೆಯ ವರದಿ ಹಾಗೂ ಧನ್ಯವಾದವಿತ್ತರು. ಶಿಕ್ಷಕಿ ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25051403

Kinnigoli-25051404 Kinnigoli-25051405 Kinnigoli-25051406

 

Comments

comments

Comments are closed.

Read previous post:
Kinnigoli-25051402
ನಳಿನ್ : ತೋಕೂರು ದೇವಳ ಭೇಟಿ

ಕಿನ್ನಿಗೋಳಿ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಮುಖಂಡರಾದ ಕೆ....

Close