ರಾಜ್ಯದ ಗ್ರಾಮೀಣ ರಸ್ತೆಗಳು ಮೇಲ್ದರ್ಜೆಗೆ

ಕಿನ್ನಿಗೋಳಿ : ರಾಜ್ಯದಲ್ಲಿ ಒಂದು ಸಾವಿರ ಕೋಟಿ ಅನುದಾನದಡಿಯಲ್ಲಿ 2000 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಡಾಮರೀಕರಣ ಮಾಡಿ ಉನ್ನತ ದರ್ಜೆಗೇರಿಸುವ ಯೋಜನೆಯಿದೆ. ದ. ಕ. ಜಿಲ್ಲೆಯಲ್ಲಿ ಕೇಂದ್ರ ರಸ್ತೆ ಅನುದಾನದ 60 ಕೋಟಿ ರೂ ವೆಚ್ಚದಲ್ಲಿ ಹಾಗೂ ಮೂಲ್ಕಿ ಮೂಡಬಿದಿರೆಯ ಕ್ಷೇತ್ರದಲ್ಲಿ 6 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನು ಡಾಮರೀಕರಣ ನಡೆಸಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಸಚಿವ ಮಹಾದೇವ ಪ್ರಸಾದ ಹೇಳಿದ್ದಾರೆ.
ಶನಿವಾರ ಐಕಳ ಗ್ರಾ. ಪಂ. ವ್ಯಾಪ್ತಿಯ ಪಟ್ಟೆ ಕ್ರಾಸ್ ಬಳಿಯಲ್ಲಿ 2 ಕೋಟಿ ರೂ ವೆಚ್ಚದ ಮಾನಂಪಾಡಿ-ಏಳಿಂಜೆ ರಸ್ತೆ, 2 ಕೋಟಿ ರೂ ವೆಚ್ಚದ ದಾಮಸ್ಕಟ್ಟೆ -ಬಳಕುಂಜೆ ರಸ್ತೆ ಹಾಗೂ ಎಕ್ಕಾರು-ನೀರುಡೆ ಕಾಮಗಾರಿಗಳನ್ನು ವೀಕ್ಷಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿ ಮಾತನಾಡಿದರು.
ರಾಜ್ಯ ಸರಕಾರದ ಸಾಮರ್ಥ್ಯದ ಮೇಲೆ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದು ಅಂದಿನ ಭೂ ಹೆದ್ದಾರಿ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡೀಸರ ಮುತುವರ್ಜಿಯಿಂದ ಮೊದಲ ಬಾರಿ ರಾಜ್ಯಕ್ಕೆ 1000 ಕೋಟಿ ಸಿಆರ್‌ಎಫ್ ನಿಧಿ ಬಂದಿದೆ ಎಂದು ವಿವರಿಸಿದರು.
ಸುಮಾರು ೩೫೫.೪೩ ಲಕ್ಷ ರೂ. ಯೋಜನೆಯ ಶೆಟ್ಟಿಬೆಟ್ಟು-ಕುದ್ರಿಪದವು- ಪಟ್ಟೆ ಕ್ರಾಸ್-ಸಂಕಲಕರಿಯ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಯುವ ಜನ ಸೇವಾ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಕಟೀಲು ಬಪಾಸ್ ರಸ್ತೆಗೆ ಪ್ರಸ್ತಾವನೆ
ರಾಜ್ಯದ ಪ್ರಸಿದ್ದ ಕಟೀಲು ಕ್ಷೇತ್ರಕ್ಕೆ ಬೈಪಾಸ್ ರಸ್ತೆಯ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಯೋಜನೆ ಸಿದ್ದಪಡಿಸಲು ಸಚಿವ ಅಭಯಚಂದ್ರ ಜೈನ್ ತಿಳಿಸಿದರು. ಶೀಘ್ರವೇ ಬೈಪಾಸ್ ರಸ್ತೆಗೆ ಕಾಯ ಕಲ್ಪ ಒದಗಿಸಲಾಗುವುದು ಎಂದು ಹೇಳಿದರು.
ಮಂಗಳೂರು ನಗರ ಶಾಸಕ ಜೆ. ಆರ್. ಲೋಬೋ, ಲೋಕೋಪಯೋಗಿ ಇಲಾಖಾಧಿಕಾರಿಗಳು, ಐಕಳ ಗ್ರಾ.ಪಂ. ಅಧ್ಯಕ್ಷೆ ಪದ್ಮಿನಿ ವಸಂತ್, ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಗ್ರಾ. ಪಂ. ಸದಸ್ಯ ಹರ್ಬಟ್ ವಿಲಿಯಂ ಲೋಬೋ, ಸುಧಾಕರ ಸಾಲ್ಯಾನ್, ಶೇಷರಾಮ ಶೆಟ್ಟಿ, ಜಯಂತ್ ಮತ್ತಿತರು ಉಪಸ್ಥಿತರಿದ್ದರು.

Kinnigoli-25051401

 

Comments

comments

Comments are closed.

Read previous post:
Kateel24051402
ಸಿತ್ಲ ಪರಕಟ್ಟ ಕಿಂಡಿ ಆಣೆಕಟ್ಟು

ಕಟೀಲು : ನಂದಿನಿ ನದಿ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು. ಸಣ್ಣ...

Close