ಉಳೆಪಾಡಿ ಮಹಮ್ಮಾಯಿ ದೇವಳ ಪ್ರತಿಷ್ಠಾ ವರ್ಧಂತಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹ್ಮಮ್ಮಾಯಿ ದೇವಳದಲ್ಲಿ ಭಾನುವಾರ ದೇವಳದ ಪ್ರತಿಷ್ಠಾ ವರ್ಧಂತಿ, ಚಂಡಿಕ ಯಾಗ, ಹಾಗೂ ಉಚಿತ ಸಾಮೂಹಿಕ ವಿವಾಹ ನಡೆಯಿತು.
ಸಾಮೂಹಿಕ ವಿವಾಹ ಯೋಜನೆ ಸರಳ ಜೀವನಕ್ಕೆ ಪ್ರೇರಣೆಯಾಗಿದೆ. ಸಂಸಾರ ನಡೆಸಲು ತಾಳ್ಮೆ ಇರಬೇಕು. ಸಂಶಯ ಇರಬಾರದು. ಈ ಎರಡು ತತ್ವಗಳನ್ನು ಜೀವನದಲ್ಲಿ ಸದಾ ಕಾಲ ಅಳವಡಿಸಿದಾಗ ಜೀವನ ಹಾಲು-ಜೇನಿನಂತಿರುತ್ತದೆ ಎಂದು ದೇವಳದ ಗೌರಾವಾಧ್ಯಕ್ಷ ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಬಳ್ಕುಂಜೆ ವಧು ವರರಿಗೆ ಶುಭ ಹಾರೈಸಿ ಮಾತನಾಡಿದರು.
ಸಾಮೂಹಿಕ ವಿವಾಹ ಅಪರಾಹ್ನ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ದೇಂದಡ್ಕ ರಾಮಕೃಷ್ಣ ಭಟ್ ಪೌರೋಹಿತ್ಯದಲ್ಲಿ 3 ಜೋಡಿ ವಧುವರರು ಹಸೆ ಮಣೆಯನ್ನೇರಿದರು. ಸಾಮೂಹಿಕ ವಿವಾಹದಲ್ಲಿ ರಾಘು ಸುವರ್ಣ-ಲೀಲಾ, ಸಂದೀಪ್ ಕುಮಾರ್-ಪ್ರತಿಭಾ, ಪ್ರಭಾಕರ-ಸುಜಯ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ ಉಳೆಪಾಡಿ ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್, ಪ್ರಕಾಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-25051407 Kinnigoli-25051408

Comments

comments

Comments are closed.

Read previous post:
Kinnigoli-25051404
ಮೌಲ್ಯಭರಿತ ಕುಟುಂಬ ಜೀವನ ಪದ್ಧತಿ

ಕಿನ್ನಿಗೋಳಿ: ಮೌಲ್ಯಭರಿತ ಕುಟುಂಬ ಜೀವನ ಪದ್ಧತಿ ಮತ್ತು ಸಂಬಂಧಗಳು ಗಟ್ಟಿಯಾದರೆ ಸಮಾಜವೂ ಸುಧಾರಣೆಯಾಗುತ್ತದೆ. ಯುವಪೀಳಿಗೆ ಸನ್ಮಾರ್ಗದಲ್ಲಿ ಮುನ್ನಡೆಯಲು ಮಹಿಳೆಯರು ತಮ್ಮ ಮಕ್ಕಳನ್ನು ಎಳವೆಯಲ್ಲಿಯೇ ಶಿಸ್ತು, ಉತ್ತಮ ಸಂಸ್ಕಾರ, ಸಂಸ್ಕೃತಿ...

Close