ಕಟೀಲು ಪತ್ತನಾಜೆ ಆಟ

ಕಟೀಲು: ಶ್ರೀ ದುರ್ಗಾಪರಮೇಶ್ವರೀ 6 ಯಕ್ಷಗಾನ ಮೇಳಗಳ ತಿರುಗಾಟವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬಾನುವಾರ ಪತ್ತನಾಜೆಯ ಆಟವು ನಡೆಯಿತು, ವರ್ಷದ ನವಂಬರ್ ನಿಂದ ಮೇ ವರೆಗೆ ಸುಮಾರು ಆರು ತಿಂಗಳ ಕಾಲ 6 ಮೇಳಗಳು ಸುಮಾರು 1080 ಸೇವೆಗಳನ್ನು ನೆರವೇರಿಸುತ್ತದೆ, ಯಕ್ಷಗಾನ ಆರಂಭ ಮತ್ತು ಮುಕ್ತಾಯದ ಆಟಗಳು ಕಟೀಲು ದೇವಳದ ರಥ ಬೀದಿಯಲ್ಲಿ 6 ರಂಗಸ್ಥಳದಲ್ಲಿ ಯಕ್ಷಗಾನದ ಪೂರ್ವರಂಗವು ನಡೆಯುತ್ತದೆ, ಒಡ್ಡೋಲಗದ ನಂತರ ಒಂದೇ ರಂಗಸ್ಥಳದಲ್ಲಿ ಮುಂದುವರಿಯುತ್ತದೆ, ಇದರಲ್ಲಿ ಆರೂ ಮೇಳಗಳ ಸುಮಾರು 240 ಕಲಾವಿದರು ಬಾಗವಹಿಸುತ್ತಾರೆ, ಕಟೀಲು ಆರೂ ಮೇಳಗಳಿಗೆ ಸುಮಾರು 20 ವರ್ಷಗಳಿಗಾಗುವಷ್ಟು ಆಟಗಳು ನೋಂದಣಿ ಆಗಿದ್ದು ಈಗಲೂ ತಿಂಗಳಿಗೆ ಸುಮಾರು 30ರಿಂದ 40 ಆಟಗಳು ನೋಂದಣಿಯಾಗುತ್ತಿದೆ ವರ್ಷಕ್ಕೆ 500 ರಷ್ಟು ಖಾಯಂ ಹಾಗೂ ಹತ್ತು ಸಮಸ್ತರ ಸೇವೆಯಾಟಗಳು ನಡೆಯುತ್ತದೆ, ಕಳೆದ ವರ್ಷ ಪ್ರಾರಂಭವಾದ ತತ್ಕಾಲ್ ಯೋಜನೆಯಡಿ 250ಕ್ಕಿಂತ ಜಾಸ್ತಿ ಸೇವೆಯಾಟಗಳು ನಡೆದಿವೆ. ಯಕ್ಷಧರ್ಮಭೋಧಿನಿ ಟ್ರಸ್ಟ್ ಮೂಲಕ ಆರು ಮೇಳಗಳ ಇನ್ನೂರೈವತ್ತರಷ್ಟು ಕಲಾವಿದರಿಗೆ ಮಳೆಗಾಲದಲ್ಲೂ ಅಂದರೆ ಮೇಳಗಳ ರಜಾಕಾಲದಲ್ಲೂ ವೇತನ ನೀಡುತ್ತಿರುವುದು, ಕಲಾವಿದರಿಗೆ ಆರೋಗ್ಯ ವಿಮೆ ಮಾಡಿರುವುದು ಕಟೀಲು ಮೇಳದ ಧನಾತ್ಮಕ ಅಂಶ. ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಅತೀ ಹೆಚ್ಚು ಮೇಳಗಳನ್ನು ಹೊಂದಿರುವ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.                                       ಮೇಳದ ಕಲಾವಿದರು ರಜಾ ಸಮಯದಲ್ಲಿ ಕೆಲವರು ಮಳೆಗಾಲದ ಮೇಳಗಳಿಗೆ ಹೋದರೆ ಇನ್ನು ಕೆಲ ಕಲಾವಿದರು ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಒಳ್ಳೆಯ ಅರ್ಥದಾರಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ, ಒಟ್ಟಿನಲ್ಲಿ ಧಾರ್ಮಿಕತೆಯ ಹೆಸರಿನಲ್ಲಿ ಸುಮಾರು ೨೫೦ ಕಲಾವಿದರಿಗೆ ಉದ್ಯೋಗ ಸಿಗುತ್ತದೆ. ಆಧುನಿಕ ಯುಗದಲ್ಲೂ  ಇಂತಹ ಸಂಸ್ಕ್ರತಿಯು ನಡೆಯುತ್ತಿರುವುದು ವಿಶೇಷ ಎನ್ನಬಹುದು.

Kateel-26051402 Kateel-26051403 Kateel-26051404

Comments

comments

Comments are closed.

Read previous post:
Kinnigoli-25051409
ಪಕ್ಷಿಕೆರೆ ಅಪಘಾತ

ಕಿನ್ನಿಗೋಳಿ : ಭಾನುವಾರ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಪೇಟೆಯ ಬಳಿ ಟೆಂಪೊ ವಾಹನವೊಂದು ತಾಂತ್ರಿಕ ತೊಂದರೆಯಿಂದಾಗಿ ರಸ್ತೆ ಬದಿಗೆ ಮಗುಚಿ ಬಿದ್ದ ಘಟನೆ ಸಂಭಾವಿಸಿದೆ. ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ...

Close