ಎರ್ಮಾಳು ಜೆಪ್ಪು ಖಂಡೇವು ಅಡೆಪು

ತುಳುನಾಡಿನಲ್ಲಿ ’ಎರ್ಮಾಳು ಜೆಪ್ಪು ಖಂಡೇವು ಅಡೆಪು’ ನಾಣ್ಣುಡಿ ಜಾರಿಯಲ್ಲಿದೆ. ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದ.ಕ. ಜಿಲ್ಲೆಯಲ್ಲಿ ತುಳು ನಾಡಿನ ಜಾತ್ರೆಗಳು ಪ್ರಾರಂಭಗೊಂಡು ಖಂಡಿಗೆ ಶ್ರೀ ಧರ್ಮರಸು ಕ್ಷೇತ್ರದ ಜಾತ್ರೆಯ ದಿನ ಜಾತ್ರೆ, ನೇಮಗಳು ಮುಕ್ತಾಯಗೊಳ್ಳುವ ಪರಿಪಾಠವಿದೆ.
ಚೇಳಾಯರು ಗ್ರಾಮದ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರತಿ ವರ್ಷ ಮೇ ೧೪ರ ಸುಮಾರಿಗೆ ಬರುವ ವೃಷಭ ಸಂಕ್ರಮಣದಂದು ನಡೆಯುತ್ತದೆ. ಈ ನದಿಯಲ್ಲಿ ಮೀನು ಹಿಡಿಯುವ ಜಾತ್ರೆಯೊಂದು ಬೃಹತ್ ಮಟ್ಟದಲ್ಲಿ ನಡೆಯುವುದು ವಾಡಿಕೆ. ಮೇಷ ಸಂಕ್ರಮಣ ವೃಷಭ ಸಂಕ್ರಮಣದವರೆಗಿನ ಒಂದು ತಿಂಗಳ ಅವಧಿಯಲ್ಲಿ ಈ ನದಿಯಲ್ಲಿ ಮೀನು ಹಿಡಿಯುವುದಕ್ಕೆ ನಿಷೇಧವಿದೆ. ಹಿಂದೊಮ್ಮೆ ಮೀನು ಹಿಡಿಯುವ ಅಡೆಪು ಜಾತ್ರೆಗೆ ತಡೆಯೊಡ್ಡಲಾಗಿತ್ತಂತೆ. ಆದರೆ ಅಡೆಪು ಮೀನು ಹಿಡಿಯುವ ಜಾತ್ರೆ ನಿಲ್ಲಿಸಕೂಡದು ಎಂದು ಉಳ್ಳಾಯ ದೈವವೇ ಅಪ್ಪಣೆ ಕೊಡಿಸಿತಂತೆ ಇದೆಲ್ಲವೂ ಸ್ಥಳೀಯರು ಹೇಳುವ ಮಾತು.
ಬೆಳಿಗ್ಗೆ 6.30ರ ಸುಮಾರಿಗೆ ದೈವಸ್ಥಾನದ ಅರ್ಚಕರು ವಾದ್ಯಘೋಷಗಳೊಂದಿಗೆ ನಂದಿನಿ ನದಿಯ ದಡಕ್ಕೆ ಆಗಮಿಸಿ ಪ್ರಸಾದ ಹಾರಿಸುವ ಮೂಲಕ ಮೀನು ಹಿಡಿಯಲು ಚಾಲನೆ ನೀಡುತ್ತಾರೆ. ದಡದಲ್ಲಿ ಕಾದು ಕುಳಿತಿದ್ದ ಜಾತಿ ಮತ ಭೇದವಿಲ್ಲದೆ ಸಾರ್ವಜನಿಕರು ನದಿಯಲ್ಲಿ ಭಕ್ತರು ಪ್ರಸಾದ ಹಾರಿಸಿ ಸುಡು ಮದ್ದು ಸಿಡಿದ ತಕ್ಷಣ ನದಿಗೆ ಧುಮುಕಿ ಮೀನು ಹಿಡಿಯಲು ತೊಡಗುತ್ತಾರೆ, ಹಿಡಿದ ಮೀನನ್ನು ಮಾರಾಟ ಮಾಡುತ್ತಾರೆ. ಹೆಚ್ಚಿನ ದರದಲ್ಲಿ ಮೀನುಗಳ ಮಾರಾಟ ನಡೆಯುತ್ತದೆ. ಬಳಿಕ ಮುಂದಿನ ವರ್ಷದ ಜಾತ್ರೆಯಂದು ಮೀನು ಹಿಡಿಯುವ ಕ್ರಮವಿದ್ದು ಮೀನು ಹಿಡಿಯುವ ಕಾರ್ಯಕ್ರಮದ ಬಳಿಕ ಕೆರೆಗೆ ಅಡ್ಡ ಕಟ್ಟುವ ಕ್ರಮವಿದ್ದು ಇದನ್ನು ಖಂಡೇವು ಅಡೆಪು ಎನ್ನುತ್ತಾರೆ.

ಮೇಷ ಸಂಕ್ರಮಣದಿಂದ ವೃಷಭ ಸಂಕ್ರಮಣದ ವರೆಗಿನ ಒಂದು ತಿಂಗಳ ಅವಧಿಯಲ್ಲಿ ಮೀನಿನ ಸಂತತಿ ಉಳಿಸುವ ಮೂಲಕ ನಮ್ಮ ಪರಿಸರವನ್ನೂ ಉಳಿಸಿ ಎಂಬ ನೀತಿಯನ್ನು ನಮ್ಮ ಜಾನಪದ ಅಚರಣೆಗಳು ಸಾರುತ್ತಿವೆ ಎನ್ನುವುದಂತೂ ಸ್ಪಷ್ಟ.

ಉಳ್ಳಾಯ ದೈವ ಸಸಿಹಿತ್ಲು ಸಾರಂತಾಯ ಗರೋಡಿಯಿಂದ ಇತಿಹಾಸ ಕಾಲದಲ್ಲಿ ಮಂಜಿ (ಬೃಹತ್ ದೋಣಿ) ಮೂಲಕ ಖಂಡಿಗೆಗೆ ಬಂದು ನೆಲೆಸಿದೆ ಎಂದು ಐತಿಹ್ಯವಿದೆ. ಸಾರಂತಾಯ ಗರೋಡಿಯಲ್ಲಿ ನೇಮೋತ್ಸವ ಸಂದರ್ಭ ಖಂಡಿಗೆಯಿಂದ ಉಳ್ಳಾಯ ದೈವದ ಮುಖವಾಡವನ್ನು ಈಗಲೂ ದೋಣಿ ಮೂಲಕ ಅಲ್ಲಿಗೆ ಕೊಂಡೊಯ್ಯಲಾಗುತ್ತಿದೆ.

ಕೆಲವರು ಇಲ್ಲಿ ಹಿಡಿದ ಮೀನನ್ನು ಇಲ್ಲಿಯೇ ಮಾರುತ್ತಾರೆ. ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಇಲ್ಲಿನ ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ. ಮೀನಿನ ದರವೂ ವಿಪರೀತ ಮಟ್ಟಕ್ಕೆ ಏರುತ್ತದೆ. 150 ರೂಪಾಯಿಯಿಂದ 1 ಸಾವಿರದ ವರೆಗೂ ಇಲ್ಲಿ ಮೀನು ಮಾರಾಟವಾಗುತ್ತಿದೆ. ಇಲ್ಲಿನ ಮೀನು ಖರೀಧಿಸಲು ಭಕ್ತರು ಆಗಮಿಸುತ್ತಾರೆ.

ಕ್ಷೇತ್ರದಲ್ಲಿ ರಾತ್ರಿ ನೇಮೋತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆದ ಬಳಿಕ ತುಳುನಾಡಿನಲ್ಲಿ ಜಾತ್ರೆ, ನೇಮೋತ್ಸವಗಳು ಅಂತ್ಯಗೊಳ್ಳುತ್ತಿದೆ.

KInnigoli-28051401 KInnigoli-28051402 KInnigoli-28051403 KInnigoli-28051404 KInnigoli-28051405 KInnigoli-28051406 KInnigoli-28051407 KInnigoli-28051408 KInnigoli-28051409 KInnigoli-28051410 KInnigoli-28051411 KInnigoli-28051412 KInnigoli-28051413 KInnigoli-28051414 KInnigoli-28051415 KInnigoli-28051416 KInnigoli-28051417 KInnigoli-28051418 KInnigoli-28051419 KInnigoli-28051420 KInnigoli-28051421 KInnigoli-28051422

Comments

comments

Comments are closed.

Read previous post:
Kinnigoli-26051412
ಪಕ್ಷಿಕೆರೆ ಬಿಜೆಪಿ ಸಂಭ್ರಮ

ಕಿನ್ನಿಗೋಳಿ : ಸೋಮವಾರ ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭದ ಪ್ರಯುಕ್ತ ಪಕ್ಷಿಕೆರೆ ಪೇಟೆಯಲ್ಲಿ ಕೆಮ್ರಾಲ್ ಗ್ರಾಮದ ಬಿ.ಜೆ.ಪಿ ಕಾರ್ಯಕರ್ತರು...

Close