ಬೇಸ್ತು ಬಿದ್ದ ಜನ

ಮುಲ್ಕಿ: ಮುಲ್ಕಿಯ ಸ್ಮಶಾನವೊಂದರಲ್ಲಿ 3 ದಿನಗಳಿಂದ ಶವವೊಂದು ಕೊಳೆತು ನಾರುತ್ತಿದೆ ಎಂಬ ಮಾಹಿತಿ ಮುಲ್ಕಿ ಪೊಲಿಸ್ ಠಾಣೆಗೆ ಬಂದಿದ್ದು ಎನೆಂದು ತಿಳಿದುಕೊಳುವಷ್ಟರಲ್ಲಿ ಪೋಲೀಸರೇ ಬೆಸ್ತು ಬಿದ್ದ ಘಟನೆ ಗುರುವಾರ ನಡೆದಿದೆ.
ಮುಲ್ಕಿ ಪೇಟೆಯ ಪಕ್ಕದಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಹೆಣ ಸುಡಲು ಯಾರೂ ಇಲ್ಲ ಅಲ್ಲದೆ ಕಾವಲು ಕಾಯಲೂ ನೌಕರರೂ ಇಲ್ಲ, ಹೆಣ ಸುಡಬೇಕಾದವರು ತಾವೇ ಸಕಲ ವ್ಯವಸ್ಥೆ ಮಾಡಿ ಹೆಣ ಸುಡಬೇಕಾಗುತ್ತದೆ, ಎಂದಿನಂತೆ ಇಂದೂ ಕೂಡ ಸ್ಥಳೀಯರು ಹೆಣವೊಂದನ್ನು ಸುಡಲು ತಯಾರಿಗಾಗಿ ಇಂದು ಬೆಳಿಗ್ಗೆ ಸ್ಮಶಾನದ ಕಡೆಗೆ ಹೋಗುವಾಗ ಸ್ಮಶಾನದಲ್ಲಿ ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟ ಕೊಳೆತ ಹೆಣವೊಂದು ಕಾಣಲು ಸಿಕಿತ್ತು. ಅಲ್ಲಿದ್ದವರು ಮುಲ್ಕಿ ಪೊಲೀಸರಿಗೆ ಹಾಗೂ ನಗರ ಪಂಚಾಯತ್ ಅಧ್ಯಕ್ಷೆಗೆ ಸುದ್ದಿ ಮುಟ್ಟಿಸಿದರು, ಮುಲ್ಕಿ ಪೋಲಿಸ್ ಅದಿಕಾರಿ ರಾಮಚಂದ್ರನಾಯಕ್ ತಮ್ಮ ತಂಡ ದೊಂದಿಗೆ ಬಂದರೆ ಇತ್ತ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಮತ್ತು ಸದಸ್ಯರು ಸ್ಥಳಕ್ಕೆ ಬಂದರು. ಹೆಣವನ್ನು ದೂರದಿಂದ ನೋಡಿದಾಗ ಮಗುವಿನ ಶವದಂತೆ ಕಂಡು ಬರುತ್ತಿತ್ತು. ಕೊಳೆತು ನಾರುತ್ತಿದ್ದ ಹೆಣವನ್ನು ಪೋಲೀಸ್ ಅಧಿಕಾರಿಗಳ ಸೂಚನೆಯಂತೆ ಹೆಣದ ಬಟ್ಟೆಯನ್ನು ಸರಿಸಿ ನೋಡಿದಾಗ ಎಲ್ಲರೂ ಬೇಸ್ತು ಬಿದ್ದರು. ಕಂಡದ್ದು ಒಂದು ನಾಯಿಯ ಹೆಣ. ಕಿಡಿಗೇಡಿಗಳ ಚೇಷ್ಟೆ ವಿಪರೀತವಾಯಿತು ಎಂದು ಜನರಾಡಿಕೊಳ್ಳುತ್ತಿದ್ದರು.

KInnigoli-30051407 KInnigoli-30051408

Comments

comments

Comments are closed.

Read previous post:
KInnigoli-30051405
ಮುಂಬಯಿ ಸಂಸದ ಕಟೀಲಿಗೆ ಭೇಟಿ

ಕಿನ್ನಿಗೋಳಿ : ಮುಂಬಯಿಯಲ್ಲಿ ಟ್ರಾಫಿಕ್ ಸಮಸ್ಯೆ ತೀರಾ ಹೆಚ್ಚಿದ್ದು ಮೋನೋ ರೈಲು ಹಾಗೂ ಮೆಟ್ರೋ ರೈಲು ಯೋಜನೆಗಳನ್ನು ಹಂತ ಹಂತವಾಗಿ ಅಬಿವೃದ್ಧಿ ಪಡಿಸಲು ನೂತನ ರೈಲ್ವೇ ಮಂತ್ರಿ ಸದಾನಂದ...

Close