ಮುಂಬಯಿ ಸಂಸದ ಕಟೀಲಿಗೆ ಭೇಟಿ

ಕಿನ್ನಿಗೋಳಿ : ಮುಂಬಯಿಯಲ್ಲಿ ಟ್ರಾಫಿಕ್ ಸಮಸ್ಯೆ ತೀರಾ ಹೆಚ್ಚಿದ್ದು ಮೋನೋ ರೈಲು ಹಾಗೂ ಮೆಟ್ರೋ ರೈಲು ಯೋಜನೆಗಳನ್ನು ಹಂತ ಹಂತವಾಗಿ ಅಬಿವೃದ್ಧಿ ಪಡಿಸಲು ನೂತನ ರೈಲ್ವೇ ಮಂತ್ರಿ ಸದಾನಂದ ಗೌಡರಲ್ಲಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಮುಂಬಯಿ ಉತ್ತರ ವಿಭಾಗ ಸಂಸದ ಗೋಪಾಲ್ ಶೆಟ್ಟಿ ಹೇಳಿದರು.

ಗುರುವಾರ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ವರದಿಗಾರರೊಂದಿಗೆ ಮಾತನಾಡಿದರು.
ಮುಂಬಯಿಯಲ್ಲಿ ಅಲ್ಲಿ ಬಿಜೆಪಿ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿ ಎರಡು ಬಾರಿ ಕಾರ್ಪೋರೇಟರ್ ಆಗಿದ್ದು ಬಳಿಕ ವಿಧಾನ ಸಭೆ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ಈ ಬಾರಿ ಅತ್ಯಂತ ದಾಖಲೆಯ ಮತಗಳಿಂದ ಸಂಸದನಾಗಿದ್ದೇನೆ. ಎಂದು ಹೇಳಿದ್ದೇನೆ.
ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ , ಲಕ್ಷ್ಮೀನಾರಾಯಣ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ, ಕುಮಾರ ಆಸ್ರಣ್ಣ , ದೇವಳದ ಪ್ರಬಂಧಕ ವಿಶ್ವೇಶ್ವರ ರಾವ್ ಸ್ವಾಗತಿಸಿದರು. ಸಂಸದರ ಜೊತೆಗೆ ಪತ್ನಿ ಉಷಾ ಗೋಪಾಲ ಶೆಟ್ಟಿ , ಎರ್ಮಾಳ್ ಹರೀಶ್ ಶೆಟ್ಟಿ , ಪುರುಷೋತ್ತಮ ಶೆಟ್ಟಿ ಕಿನ್ನಿಗೋಳಿ, ಸುರೇಶ್ ಶೆಟ್ಟಿ ಪುಚ್ಚಾಡಿ ಸೊರಿಂಜೆ ಮತ್ತಿತರರು ಉಪಸ್ಥಿತರಿದ್ದರು.

KInnigoli-30051403 KInnigoli-30051404 KInnigoli-30051405 KInnigoli-30051406

Comments

comments

Comments are closed.

Read previous post:
KInnigoli-30051402
ಕೆಮ್ರಾಲ್ ಬಿಜೆಪಿ ಸದಸ್ಯರ ಧರಣಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಬಿಜೆಪಿ ಬೆಂಬಲಿತರ ಧರಣಿಯಿಂದಾಗಿ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಕೆಮ್ರಾಲ್ ಗ್ರಾಮಪಂಚಾಯಿತಿ ಆಡಳಿತದಲ್ಲಿರುವ ಕಾಂಗ್ರೆಸ್...

Close