ಕೆಮ್ರಾಲ್ ಬಿಜೆಪಿ ಸದಸ್ಯರ ಧರಣಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆ ಬಿಜೆಪಿ ಬೆಂಬಲಿತರ ಧರಣಿಯಿಂದಾಗಿ ಮುಂದೂಡಲ್ಪಟ್ಟ ಘಟನೆ ನಡೆದಿದೆ. ಕೆಮ್ರಾಲ್ ಗ್ರಾಮಪಂಚಾಯಿತಿ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರು ಮೈಸೂರಿನಲ್ಲಿ ನಡೆಸಿದ್ದಾರೆನ್ನಲಾದ ಅನೈತಿಕ ಚಟುವಟಿಕೆ ಕುರಿತು ತನಿಖೆ ನಡೆಯಬೇಕು ಹಾಗೂ ಕೆಮ್ರಾಲ್ ಗ್ರಾಮ ಪಂಚಾಯಿತಿಗೆ ಕೆಟ್ಟ ಹೆಸರು ಬಂದಿದೆ ಆದುದರಿಂದ ನೈತಿಕ ಹೊಣೆಹೊತ್ತು ಆ ಸದಸ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿ ಪಂಚಾಯಿತಿನ ಎದುರು ಧರಣಿ ಕುಳಿತರು.
ಈತನ ವಿರುದ್ದ ಈ ಹಿಂದೆಯೂ ಅನೇಕ ಪ್ರಕರಣಗಳಿದ್ದು, ಸದಸ್ಯತನದ ಅನರ್ಹತೆ ಬಗ್ಗೆ ಮೇಲಿನ ಅಧಿಕಾರಿಗಳಿಗೆ ದೂರು ನೀಡಲಾಗುವುದು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆಯು ಪ್ರತಿಭಟನೆ ಮಾಡಲಾಗುವುದು ಎಂದು ಸದಸ್ಯ ಸುಧಾಕರ ಶೆಟ್ಟಿ ಹಾಗೂ ರಾಮದಾಸ ಶೆಟ್ಟಿ ಹೇಳಿದರು.
ಸದಸ್ಯನ ಬಗ್ಗೆ ಆರೋಪ ಇನ್ನೂ ದೃಢಪಟ್ಟಿಲ್ಲ ಆದುದರಿಂದ ರಾಜೀನಾಮೆಯ ಪ್ರಶ್ನೆಯೇ ಇಲ್ಲ. ಆರೋಪ ದೃಢ ಪಟ್ಟರೆ ಮುಂದಿನ ಕೃಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಸದಸ್ಯ ಅಬ್ದುಲ್ ಕಾದರ್ ತಿಳಿಸಿದ್ದಾರೆ.

KInnigoli-30051402

Comments

comments

Comments are closed.

Read previous post:
Gahan
Happy 1st birthday : Gahan

Colorful balloons, lots of presents and a delicious cake with only one candle on it. These are things that make...

Close