ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ

ಮೂಲ್ಕಿ: ಎಳೆ ವಯಸ್ಸಿನಲ್ಲೇ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕಲಿಸಿ ಸಮಾಜದಲ್ಲಿ ಮೇರು ವ್ಯಕಿತ್ವ ಬೆಳೆಸಿಕೊಳ್ಳಲು ಶಿಕ್ಷಕರು ನೆರವಾಗಬೇಕೆಂದು ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ವೆರೋನಿಕಾ ಪಿಂಟೋ ಹೇಳಿದರು.

ಕಳೆದ ಎಂಟು ವರ್ಷಗಳಿಂದ ಶಾಲೆಯ ಮುಖ್ಯೋಪಾದ್ಯಾಯಿನಿ ಹುದ್ದೆಯಲ್ಲಿದ್ದುಕೊಂಡು ಇದೀಗ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆಗೆ ವರ್ಗಾವಣೆಗೊಂಡ ನಿಮಿತ್ತ ಶಾಲೆಯ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಲಾ ಪ್ರಾರಂಭೋತ್ಸವನ್ನು ಕೂಡ ನಡೆಸಲಾಯಿತು. ಶಿಕ್ಷಕಿ ಹಿಲ್ಡಾ ಸ್ವಾಗತಿಸಿದರು.ವೇದಿಕೆಯಲ್ಲಿ ಒಲೇರಿಯನ್ ರೊಡ್ರಿಗಸ್,ಶಿಕ್ಷಕಿಯರಾದ ಪೌಸ್ತಿನ್ ಡಿಸೋಜ,ಮೋನಿಕಾ,ಮೆಗ್ದಲಿನ್ ಡಿಸೋಜ, ಕೋನಿ ವಾಸ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ರೋಸಿ ಧನ್ಯವಾದ ಅರ್ಪಿಸಿದರು.

Kinnigoli-31051406PuneethKrishna

Comments

comments

Comments are closed.