ಉಪ್ಪು ಮಿಶ್ರಿತ ನದಿ ನೀರು ಗದ್ದೆಗಳಿಗೆ???

ಕಿನ್ನಿಗೋಳಿ : ಭೂಮಿಯ ಎರಡನೇ ಮೂರು ಭಾಗ ಸಾಗರದಿಂದ ಆವೃತವಾಗಿ ನೀರೇ ಆವರಿಸಿದ್ದರೂ ಇಡೀ ಜಗತ್ತು ನೀರಿನ ಸಮಸ್ಯೆ ಎದುರಿಸುತ್ತಿದೆ ಸಮುದ್ರಕ್ಕೂ ಮತ್ತು ನದಿಗಳಿಗೂ ಒಂದು ಜೈವಿಕ ಸಂಬಂಧವಿದೆ. ನದಿಗಳ ಸಿಹಿ ನೀರು ಹರಿದರೂ ಸಮುದ್ರದಲ್ಲಿ ಉಪ್ಪಾಗುತ್ತದೆ. ಆದರೆ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಉಪ್ಪು ನೀರಿರುವುದರಿಂದ ಅಲ್ಪ ಪ್ರಮಾಣದ ಸಿಹಿ ನೀರು ಸೇರಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ತಜ್ಞರ ಅಭಿಮತ.
ಇನ್ನೇನು ಕೆಲ ದಿನಗಳಲ್ಲೇ ಮಳೆ ಪ್ರಾರಂಭವಾಗಲಿದೆ, ಮಳೆರಾಯನ ಬರುವಿಕೆಗಾಗಿ ರೈತರು ತವಕದಲ್ಲಿದ್ದು ಕೃಷಿ ಚಟುವಟಿಕೆಗಳಿಗೆ ತಯಾರಾಗಿದ್ದಾರೆ. ಆದರೆ ಕಿನ್ನಿಗೋಳಿ ಸಮೀಪದ ಉಳೆಪಾಡಿಯಿಂದ ಬಳ್ಕುಂಜೆ ಪಲಿಮಾರು ಪರಿಸರದ ರೈತರು ಮಾತ್ರ ತಲೆಮೇಲೆ ಕೈ ಇಡುವ ಪರಿಸ್ಥಿತಿ ಬಂದೊದಗಿದೆ. ಶಾಂಭವಿ ನದಿಗೆ ಉಪ್ಪು ಮಿಶ್ರಿತ ನೀರು ಕೃಷಿ ಭೂಮಿಯ ಮಣ್ಣನ್ನು ಸೇರಿ ಬೆಳೆಗೆ ಮಾರಕವಾಗಿದೆ. ಇದರಿಂದ ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ

ಏಣೆಲು ಬೆಳೆ ಬೆಳೆಯಲು ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ರೈತರು ನೇಜಿಗಾಗಿ ಬಿತ್ತನೆ ಮಾಡಿದ್ದರು, ಆದರೆ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೆ ಕೊಳೆಯುತ್ತಿದೆ, ಇದಕ್ಕೆ ಮುಖ್ಯ ಕಾರಣ ಶಾಂಭವಿ ನದಿಯಲ್ಲಿ ಬರುತ್ತಿರುವ ಉಪ್ಪು ನೀರು. ಶಾಂಭವಿ ನದಿ ತಟ ಪ್ರದೇಶಗಳಾದ ಉಳೆಪಾಡಿ, ಸಂಕಲಕರಿಯ, ಕರಿಯತ್ತಲಗುಂಡಿ ಸಂಕಲಕರಿಯ ಬಳ್ಕುಂಜೆ ಕರ್ನಿರೆ ಪಲಿಮಾರು ಮುಂಡ್ಕೂರು ಮುಂತಾದ ಪ್ರದೇಶಗಳ ನೂರಾರು ಗ್ರಾಮಸ್ಥರು ಕೃಷಿಯನ್ನೇ ಜೀವನಾಧರವಾಗಿಕೊಂಡಿದ್ದಾರೆ. ಸುಮಾರು 500 ರಿಂದ 800 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆಗಾಗಿ ಬಿತ್ತನೆ ಮಾಡಲಾಗಿತ್ತು ಬಿತ್ತನೆ ಮಾಡಿದ ಗದ್ದೆಗಳಿಗೆ ಪ್ರತೀ ವರ್ಷ ನದಿಯ ನೀರನ್ನು ಹಾಯಿಸಲಾಗುತ್ತದೆ, ನದಿಗೆ ಈ ವರ್ಷ ಉಪ್ಪು ನೀರು ಬಂದಿರುವುದರಿಂದ ಬಿತ್ತನೆ ಮಾಡಿದ ಬೀಜಗಳು ಮೊಳಕೆ ಒಡೆಯದೆ ಕೊಳೆಯುತ್ತಿದೆ. ಕೆಲವು ಸಸಿಗಳು ಮೊಳಕೆ ಒಡೆದಿದ್ದರೂ ಈಗ ಕೊಳೆಯಲು ಪ್ರಾರಂಭವಾಗಿದೆ.

ಶಾಂಭವಿ ನದಿಗೆ ಕರ್ನಿರೆ ಫಲಿಮಾರು ಬಳಿ ಕಟ್ಟಿದ ಅಣೆಕಟ್ಟು ಬಳಿಯ ಮೂರು ಗೇಟುಗಳನ್ನು ಸರಿಯಾಗಿ ಅಳವಡಿಸದ ಕಾರಣ ಉಪ್ಪು ನೀರು ನೀರಿನ ಉಬ್ಬರ ಇಳಿತದ ಒತ್ತಡದಿಂದಾಗಿ ಅಣೆಕಟ್ಟು ಮೂಲಕ ನದಿಗೆ ಬರುವುದರಿಂದ ಉಪ್ಪು ನೀರು ಬಂದಿದೆ. ಫೆಬ್ರವರಿ ತಿಂಗಳಲ್ಲಿಯೇ ಸರಿಯಾದ ರೀತಿಯಲ್ಲಿ ಅಣೆಕಟ್ಟಿಗೆ ಗೇಟುಗಳನ್ನು ಹಾಕಿದ್ದರೆ ನದಿ ನೀರು ಉಪ್ಪಾಗುತ್ತಿರುತ್ತಿಲ್ಲ ಗೇಟು ಕಾಮಗಾರಿ ನಿರ್ವಹಿಸುವವರ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಕೃಷಿಕ ಕುಟುಂಬಗಳು ಭತ್ತದ ಕೃಷಿ ಮಾಡದಂತಾಗಿದೆ. ಎಂದು ಬಳ್ಕುಂಜೆ ಸಂಕಲರಿಯ ಉಳೆಪಾಡಿ ಗ್ರಾಮಸ್ಥರು ದುಗುಡ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೇನು ಮಳೆ ಬಂದು ನಾಟಿ ಕಾರ್ಯ ಆರಂಭಿಸಬೇಕಾದ ರೈತರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ ಮಳೆಬಂದ ಮೇಲೆ ಬಿತ್ತನೆ ಮಾಡುವ ಅವಕಾಶವಿದ್ದರೂ ಬಿತ್ತನೆ ಬೀಜ ಇಲ್ಲದಂತಾಗಿದೆ ರೈತರೇ ದೇಶದ ಬೆನ್ನೆಲುಬು ಎಂದು ಹೇಳುವ ಜನಪ್ರತಿ ನಿಧಿಗಳು ಈ ರೈತರ ಸಮಸ್ಯೆಗಳನ್ನು ಅರಿತು ಪರಿಹಾರ ಒದಗಿಸಬೇಕಾಗಿದೆ.

ಕುಂಟುತ್ತಾ ತೆವಳುತ್ತಾ ಸಾಗುತ್ತಿರುವ ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬಳ್ಕುಂಜೆ ಸಮೀಪ ಶಾಂಭವಿ ನದಿ ನೀರನ್ನು ಪಂಪ್ ಮಾಡಿ ಕೊಲ್ಲೂರಿನಲ್ಲಿ ನಿರ್ಮಿಸಿದ ಬೃಹತ್ ಟ್ಯಾಂಕ್ ಮೂಲಕ 17 ಗ್ರಾಮಗಳಿಗೆ ವಿವಿಧ ಟ್ಯಾಂಕಿಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಕೂಡಾ ಈವರೆಗೂ ಸೂಕ್ತ ರೀತಿಯಲ್ಲಿ ಜಾರಿಗೆ ಕಂಡಿಲ್ಲ. ಕಾರಣ ಬೇಸಿಗೆ ಕಾಲದಲ್ಲಿ ಕವತ್ತಾರು ಗ್ರಾಮದ ನೀರಿನ ಸಮಸ್ಯೆ ಜಾಸ್ತಿ ಇದ್ದ ಪ್ರಯುಕ್ತ ಪ್ರಾಯೋಗಿಕ ನೆಲೆಯಲ್ಲಿ ಕವತ್ತಾರು ಪ್ರದೇಶದಲ್ಲಿ ಮಾತ್ರ ಕುಡಿಯುವ ನೀರು ಸರಬರಾಜು ಮಾಡಿದ್ದರಿಂದ ಜನರು ಹರ್ಷಿತರಾದರೂ ಅವರಿಗೆ ನಿರಾಸೆ ಮೂಡಿಸಿದೆ ಕಾರಣ ಪೈಪಿನಲ್ಲಿ ಉಪ್ಪು ನೀರು.

5 ವರ್ಷದ ಹಿಂದೆ ಇಂತಹ ತೀವ್ರ ತರದ ಸಮಸ್ಯೆ ಬಂದೊಗಗಿತ್ತು. ಈಗ ಸಮಸ್ಯೆ ಮರುಕಳಿಸಿದೆ. ಮಳೆಗಾಲದ ನಿರೀಕ್ಷೆಯೇ ನಮಗೆ ದಾರಿದೀಪ. ಹೀಗಾದರೆ ಅರ್ಧಕ್ಕೆ ಅರ್ಧ ಇಳುವರಿ ಕಡಿಮೆ ಬರುವ ಸಂಭವವಿದೆ. ಕೂಲಿಯಾಳುಗಳು ಕೂಡಾ ಕೆಲಸಕ್ಕೆ ದೊರಕುತ್ತಿಲ್ಲ ಗದ್ದೆಗಳ ಫಲವತ್ತತೆ ಕಡೆಇಮೆಯಾಗಬಲ್ಲದು

ಕರಿಯಣ್ಣ ಶೆಟ್ಟಿ ಉಳೆಪಾಡಿ
ಕೃಷಿಕ 

ನುರಿತ ತಂತ್ರಜ್ಞರಿಂದ ಸಾಧಕ ಭಾದಕಗಳನ್ನು ಪರಾಮರ್ಶಿಸಿ ಅಣೆಕಟ್ಟಿನ ಗೇಟಿನ ಭದ್ರತೆ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಕೃಷಿಗೆ ಸಂಬಂಧಪಟ್ಟ ಇಲಾಖೆಗಳು ತ್ವರಿತ ಸ್ಪಂದನೆ ನೀಡಬೇಕಾಗಿದೆ. ಕೃಷಿ ಕಾರ್ಮಿಕರ ಕೊರತೆ, ಸರಿಯಾದ ಸಮಯಕ್ಕೆ ಸಿಗದ ಬೀಜ ಗೊಬ್ಬರಗಳು ಹಾಗೂ ಇನ್ನಿತರ ಸಮಸ್ಯೆಗಳಿಂದ ಇಂದು ಕೃಷಿಕ ಕೃಷಿಯನ್ನೆ ಬಿಡಬೇಕಾದ ಪ್ರಮೇಯ ಬಂದಿದೆ.
ಹರೀಶ್ ಪೂಜಾರಿ
ಕೃಷಿಕ ಉಳೆಪಾಡಿ

ಅಣೆಕಟ್ಟಿನ ಗೇಟು ತೆಗೆಯುತ್ತಿರುವುದು ಅಲ್ಲದೆ ಹಲಗೆಗಳ ಅಸಮರ್ಪಕ ಜೋಡನೆ ಉಪ್ಪುನೀರು ಬರಲು ಮೂಲ ಕಾರಣವಾಗಿದೆ. ಮಳೆಗಾಲ ಮುಗಿದಾಕ್ಷಣ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಮೂಲ್ಕಿ ಸಮೀಪದ ಮಟ್ಟುವಿನಲ್ಲಿ ೬ ಕೋಟಿ ವೆಚ್ಚದ ಅಣೆಕಟ್ಟು ನಿರ್ಮಾಣಗೊಳ್ಳಲಿದೆ ನಂತರ ಉಪ್ಪು ನೀರಿನ ಸಮಸ್ಯೆ ಸಂಪೂರ್ಣ ಬಗೆ ಹರಿಯಬಹುದು.
ನೆಲ್ಸನ್ ಲೋಬೋ ಬಳ್ಕುಂಜೆ
ತಾಲ್ಲೂಕು ಪಂಚಾಯಿತಿ ಸದಸ್ಯ

Kinnigoli-31051403 Kinnigoli-31051404 Kinnigoli-31051405

Comments

comments

Comments are closed.

Read previous post:
Kinnigoli-31051402
ಗುತ್ತಕಾಡು ಶಾಲಾ ಪ್ರಾರಂಭೋತ್ಸವ

ಕಿನ್ನಿಗೋಳಿ : ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ತಾಳಿಪಾಡಿ ಗುತ್ತು ಧನಪಾಲ್ ಶೆಟ್ಟಿ ಹಾಗೂ ನಿವೃತ...

Close