ಏಳಿಂಜೆ : ಉಚಿತ ಆರೋಗ್ಯ ಶಿಬಿರ

ಕಿನ್ನಿಗೋಳಿ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸುಗಳಿಸಬೇಕಾದರೆ ಸದೃಢ ಆರೋಗ್ಯ ಹಾಗೂ ಮಾನಸಿಕ ಸ್ಥಿರತೆ ಮುಖ್ಯ. ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಜನಸೇವೆಯನ್ನು ಧ್ಯೇಯವಾಗಿಟ್ಟುಕೊಂಡು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುತಿದೆ. ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಛಾವಡಿಮನೆ ಜಗನ್ನಾಥ ಎಸ್. ಶೆಟ್ಟಿ ಹೇಳಿದರು.
ಭಾನುವಾರ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ದೇವಳದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ( ರಿ) ಕಿನ್ನಿಗೋಳಿ, ಶ್ರೀನಿವಾಸ ಆಸ್ಪತ್ರೆ , ಮುಕ್ಕ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ದೇವಳದ ಅರ್ಚಕ ಗಣೇಶ್ ಭಟ್, ವೈ. ಯೋಗೀಶ್ ರಾವ್, ಮುಕ್ಕ ಆಸ್ಪತ್ರೆಯ ಮುಖ್ಯಸ್ಥ ಎಲ್. ಎಲ್. ಜೋಸ್ವಾ , ಅಧೀಕ್ಷಕ ಡಾ| ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-02061402

Comments

comments

Comments are closed.

Read previous post:
Kinnigoli-02061401
ಸಂಸ್ಕಾರಯುತ ಭಾರತೀಯ ನೃತ್ಯ ಪರಂಪರೆ

ಕಿನ್ನಿಗೋಳಿ : ಶಾಸ್ತ್ರೀಯ ಸಂಗೀತ, ಭರತನಾಟ್ಯದಂತಹ ಶಿಸ್ತು ಬದ್ಧ ಕಲಾ ಪ್ರಕಾರಗಳಿಂದ ಮಕ್ಕಳಲ್ಲಿ ಸಂಸ್ಕಾರ, ಮಾನಸಿಕ ನೆಮ್ಮದಿ, ಬೌದ್ಧಿಕ ಬೆಳವಣಿಗೆ ಸಾಧ್ಯ ಎಂದು ಕಟೀಲು ದೇವಳ ಅರ್ಚಕ ಕಮಲಾದೇವಿ...

Close