ಸಂಸ್ಕಾರಯುತ ಭಾರತೀಯ ನೃತ್ಯ ಪರಂಪರೆ

ಕಿನ್ನಿಗೋಳಿ : ಶಾಸ್ತ್ರೀಯ ಸಂಗೀತ, ಭರತನಾಟ್ಯದಂತಹ ಶಿಸ್ತು ಬದ್ಧ ಕಲಾ ಪ್ರಕಾರಗಳಿಂದ ಮಕ್ಕಳಲ್ಲಿ ಸಂಸ್ಕಾರ, ಮಾನಸಿಕ ನೆಮ್ಮದಿ, ಬೌದ್ಧಿಕ ಬೆಳವಣಿಗೆ ಸಾಧ್ಯ ಎಂದು ಕಟೀಲು ದೇವಳ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಶನಿವಾರ ಕಿನ್ನಿಗೋಳಿ ಅನುಗ್ರಹ ಸಭಾಗೃಹದಲ್ಲಿ ಭರತಾಂಜಲಿ ಪ್ರಸ್ತುತ ಪಡಿಸಿದ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂಬಯಿ ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ನಾಗೇಶ್ ಬಪ್ಪನಾಡು, ದೇವಪ್ರಸಾದ್ ಪುನರೂರು, ಶ್ರೀಧರ ಹೊಳ್ಳ, ಪ್ರತಿಮಾ ಶ್ರೀಧರ್, ವಾದಿರಾಜ ಕಲ್ಲೂರಾಯ, ನೃತ್ಯ ತರಬೇತುದಾರರಾದ ಕುಮಾರಿ ಅನ್ನಪೂರ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-02061401

Comments

comments

Comments are closed.

Read previous post:
Kinnigoli-31051406
ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ

ಮೂಲ್ಕಿ: ಎಳೆ ವಯಸ್ಸಿನಲ್ಲೇ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕಲಿಸಿ ಸಮಾಜದಲ್ಲಿ ಮೇರು ವ್ಯಕಿತ್ವ ಬೆಳೆಸಿಕೊಳ್ಳಲು ಶಿಕ್ಷಕರು ನೆರವಾಗಬೇಕೆಂದು ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ವೆರೋನಿಕಾ...

Close