ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಕೊಡೆತ್ತೂರು ಮೂಡುದೇವಸ್ಯ ಬಳಿಯ ಮಹಿಳೆಯೋರ್ವರು ರಾತ್ರಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ದಾರುಣವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತಪಟ್ಟ ಮಹಿಳೆ ಸುಂದರ ಶೆಟ್ಟಿ ಎಂಬವರ ಪತ್ನಿ ಶೋಭಾ ಶೆಟ್ಟಿ (54ವರ್ಷ) ಮಂಗಳವಾರ ಮುಂಜಾನೆ ತಮ್ಮ ಹಟ್ಟಿಯಲ್ಲಿದ್ದ ದನಗಳ ಹಾಲು ಕರೆದು ದನ ಕಟ್ಟಲು ಗದ್ದೆಗೆ ತೆರಳಿದ್ದಾಗ ವಿದ್ಯುತ್ ಕಂಬದಿಂದ ಕಡಿದು ಬಿದ್ದಿದ್ದ ತಂತಿಯನ್ನು ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಮಹಿಳೆ ಶೋಭಾ ಶೆಟ್ಟಿ ಅವರೇ ಬಡ ಸಂಸಾರಕ್ಕೆ ಆಸರೆ ಆಗಿದ್ದರು ಎನ್ನಲಾಗಿದೆ. ಈಕೆಯ ಪತಿ ಸುಂದರ ಶೆಟ್ಟಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದು ಮೂವರು ಹೆಣ್ಣು ಮಕ್ಕಳಲ್ಲಿ ಒರ್ವರಿಗೆ ಮದುವೆಯಾಗಿದ್ದು ಇನ್ನಿಬ್ಬರು ಅವಳಿ ಜವಳಿ ಮಕ್ಕಳಾಗಿದ್ದು ಸ್ಥಳೀಯವಾಗಿ ಕೆಲಸಕ್ಕೆ ಹೋಗುತ್ತಿದ್ದರು.
ರಾತ್ರಿ ಸಿಡಿಲು ಬಡಿದು ಕಂಬದಲ್ಲಿ ಅಳವಡಿಸಿದ್ದ ಪಿಂಗಾಣಿಯ ಕನೆಕ್ಟರ್ ಸಹಿತ ತಂತಿ ಬಿದ್ದಿರಬಹುದು, ಮನೆಯ ಮಾಡಿನ ಹತ್ತಿರವೇ ವಿದ್ಯುತ್ ತಂತಿಗಳು ಹಾದು ಹೋಗಿರುವುದು ಅಲ್ಲದೆ ಇಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಿನ್ನಿಗೋಳಿ ಮೆಸ್ಕಾಂ ಶಾಖೆ ವತಿಯಿಂದ ತಂತಿಗಳನ್ನು ಬದಲಿಸುವ ಕೆಲಸ ಆಗಿತ್ತು ಆದರೆ ಮೃತಪಟ್ಟ ಮಹಿಳೆಯ ಮನೆಯ ಹತ್ತಿರ ತಂತಿ ಬದಲಾವಣೆ ಆಗದಿರುವುದು ಹಳೆ ತಂತಿಗಳೇ ಘಟನೆಗೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಿನ್ನಿಗೋಳಿ ಶಾಖಾ ಇಂಜಿನಿಯರ್ ಹಾಗೂ ಸುರತ್ಕಲ್ ವಿಭಾಗದ ಸಹಾಯಕ ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವರದಿಯನ್ನು ಶೀಘ್ರವಾಗಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಕಂದಾಯ ಅಧಿಕಾರಿ ನಿತ್ಯಾನಂದ ದಾಸ್, ಗ್ರಾಮ ಲೆಕ್ಕಿಗ ಕಿರಣ್ ಸ್ಥಳ ಪರಿಶೀಲನೆ ಮಾಡಿದ್ದು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಭೇಟಿ ನೀಡಿ ಮಹಿಳೆಯ ಮನೆಯವರಿಗೆ ಸಾಂತ್ವನ ಹೇಳಿ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾರೆ. ಅಲ್ಲದೇ ಮೆಸ್ಕಾಂ ಇಲಾಖೆಯು ಸಹ ಸೂಕ್ತವಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Kinnigoli 03061401 Kinnigoli 03061402 Kinnigoli 03061403 Kinnigoli 03061404 Kinnigoli 03061405

Comments

comments

Comments are closed.

Read previous post:
Kinnigoli-02061403
ವ್ಯಾಯಾಮ ಶಾಲೆ : ಪುಸ್ತಕ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಭಾನುವಾರ ವ್ಯಾಯಾಮ ಶಾಲಾ ವಠಾರದಲ್ಲಿ ನಡೆಯಿತು. ಸುಮಾರು 60 ಸಾವಿರ...

Close