ಉಮ್ಮೆಟ್ಟು ಕಾಂಕ್ರೀಟು ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಉಮ್ಮೆಟ್ಟು ಬಳಿ ಮೂಲಭೂತ ಸೌಕರ್ಯ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ನಿಧಿಯ ಅನುದಾನದಲ್ಲಿ ಏಳು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟು ರಸ್ತೆಯ ಗುದ್ದಲಿ ಪೂಜೆಯನ್ನು ಮಂಗಳವಾರ ಯುವಜನ ಸೇವಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಟೀಲು ದೇವಳ ಹಾಗೂ ಮೂಡಬಿದ್ರಿಯಲ್ಲಿ ಯಾತ್ರಿ ನಿವಾಸಕ್ಕಾಗಿ ತಲಾ ಒಂದು ಕೋಟಿ ಮಂಜೂರಾಗಿದ್ದು ಮುಂದೆಯೂ ತಲಾ ಒಂದು ಕೋಟಿ ಪ್ರವಾಸೋಧ್ಯಮ ಯೋಜನೆಯಡಿಯಲ್ಲಿ ನೀಡಲಾಗುವುದು. ಮೆನ್ನಬೆಟ್ಟು ಗ್ರಾಮದ ಕೆಮ್ಮಡೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಅನುದಾನದ ಯೋಜನೆಯಲ್ಲಿ ಸುಮಾರು 15 ಲಕ್ಷ ವೆಚ್ಚದಲ್ಲಿ ಸಂಪೂರ್ಣ ರಸ್ತೆ ಸರಿಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಮೋನಪ್ಪ ಶೆಟ್ಟಿ ಎಕ್ಕಾರು, ಗೀತಾ ಸಾಲ್ಯಾನ್, ನವೀನ್ ಕುಮಾರ್, ಸಂಜೀವ ಮಡಿವಾಳ, ಡೋಲ್ಪಿ ಸಂತುಮಾಯೋರ್, ಸುನಿಲ್ ಸಿಕ್ವೇರಾ, ಟಿ.ಎಚ್. ಮಯ್ಯದ್ದಿ, ರಮೇಶ್, ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli 03061406

Comments

comments

Comments are closed.

Read previous post:
Kinnigoli 03061401
ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಕೊಡೆತ್ತೂರು ಮೂಡುದೇವಸ್ಯ ಬಳಿಯ ಮಹಿಳೆಯೋರ್ವರು ರಾತ್ರಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ದಾರುಣವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ...

Close