ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಗಾರ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕಿನ್ನಿಗೋಳಿ ವಲಯ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಗಾರ ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರು ತಾಲೂಕು ಯೋಜನಾಧಿಕಾರಿ ರಾಘವ ಎಂ. ಯೋಜನೆಯ ಮಾಹಿತಿ ನೀಡಿದರು. ವಲಯಾಧ್ಯಕ್ಷ ವೆಂಕಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತರಬೇತಿದಾರರಾದ ಸರಸ್ವತಿ ಹಾಗೂ ಮಾಲತಿ ತರಬೇತಿ ನೀಡಿದರು.
ಬಬಿತಾ ಸುವರ್ಣ ಸ್ವಾಗತಿಸಿ ಶುಭಲತಾ ಆರ್ ವಂದಿಸಿದರು. ಕಿನ್ನಿಗೋಳಿ ವಲಯದ ಮೇಲ್ವಿಚಾರಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli 04061401

Comments

comments

Comments are closed.

Read previous post:
Kinnigoli 03061406
ಉಮ್ಮೆಟ್ಟು ಕಾಂಕ್ರೀಟು ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡುಗೋಡು ಗ್ರಾಮದ ಉಮ್ಮೆಟ್ಟು ಬಳಿ ಮೂಲಭೂತ ಸೌಕರ್ಯ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ನಿಧಿಯ ಅನುದಾನದಲ್ಲಿ ಏಳು ಲಕ್ಷ ರೂ. ವೆಚ್ಚದಲ್ಲಿ...

Close