ರೋಟರಿ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ: ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಸೇವಾ ಸೌಹಾರ್ದದ ಮನೋಭಾವ ಬೆಳೆಸಿ sಸಭ್ಯ ಸಮಾಜದ ನಿರ್ಮಾಣ ಮಾಡಲು ರೋಟರಿ ಮಿತ್ರರು ಸಹಕರಿಸಬೇಕು ಎಂದು ರೋಟರಿ ಜಿಲ್ಲೆ ೩೧೮೦ ವಲಯ ೪ರ ಸಹಾಯಕ ಗವರ್ನರ್ ಡಾ| ಅರವಿಂದ ಭಟ್ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಸಹಕಾರ ಸೌಧ ಸಭಾ ಭವನದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಆಯೋಜಿಸಿದ ರೋಟರಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೊ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಜಿಲ್ಲೆ ೩೧೮೦ ವಲಯ 3ರ ನಿಯೋಜಿತ ಸಹಾಯಕ ಗವರ್ನರ್ ನಾಗೇಂದ್ರ ರೋಟರಿಯ ಧ್ಯೇಯ ಉದ್ದೇಶಗಳ ಬಗ್ಗೆ ಪೂರಕ ಮಾಹಿತಿ ನೀಡಿದರು.
ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಜೊಕಿಂ ಸಿಕ್ವೇರಾ, ನಿಯೋಜಿತ ಅಧ್ಯಕ್ಷ ವಿಲಿಯಂ ಸಿಕ್ವೇರಾ ಉಪಸ್ಥಿತರಿದ್ದರು.
ರೋಟರಿ ವಲಯ 3 ರ ನಿಯೋಜಿತ ವಲಯ ಸೇನಾನಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 04061402

 

Comments

comments

Comments are closed.

Read previous post:
ಜೂನ್ 15 ರಂದು ಕಟೀಲಿನಲ್ಲಿ ಸಾಮೂಹಿಕ ಬ್ರಹ್ಮೊಪದೇಶ

ಕಿನ್ನಿಗೋಳಿ: ಕಟೀಲು ದಿ|ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇದರ ಆಶ್ರಯದಲ್ಲಿಸಾಮೂಹಿಕ ಬ್ರಹ್ಮೋಪದೇಶ ಜೂ. 15 ರಂದು ಕಟೀಲು ದಿ|...

Close