ಹರಿಹರ ರಾಮಭಜನಾ ಮಂದಿರದಲ್ಲಿ ಬ್ರಹ್ಮಕಲಶ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಗೋಳಿಜೋರ ಹರಿಹರ ಶ್ರೀ ರಾಮ ಭಜನಾ ಮಂದಿರದ ನವೀಕೃತ ಆಲಯದ ಸಮರ್ಪಣೆ ಹಾಗೂ ಶ್ರೀ ಕೋದಂಡರಾಮ ದೇವರ ಬಿಂಬ ಪುನಪ್ರತಿಷ್ಟೆ, ಬ್ರಹ್ಮಕಲಶೋತ್ಸವ ದಿನಾಂಕ 7ರಿಂದ 10ರವರೆಗೆ ನಡೆಯಲಿದೆ.
ದಿನಾಂಕ 7 ರಂದು ಕಿನ್ನಿಗೋಳಿಯಿಂದ ಶ್ರೀ ಕೋದಂಡರಾಮ ದೇವರ ರಜತ ಕವಚವನ್ನು ಮೆರವಣಿಗೆಯಲ್ಲಿ ಗೋಳಿಜೋರದವರೆಗೆ ತರಲಾಗುವುದು. ಬಳಿಕ ಉಗ್ರಾಣ, ತೋರಣ ಮುಹೂರ್ತ, ಪ್ರಕಾಶ್ ಆಚಾರ್ಯ ನೇತೃತ್ವದ ಜನನಿ ಮೆಲೋಡಿಸ್ ತಂಡದಿಂದ ಭಕ್ತ ರಸಮಂಜರಿ ಜರಗಲಿದೆ.
ದಿನಾಂಕ 8ರಂದು ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಕಲಶ ಹೋಮ, 108ಕಲಶ ಸಹಿತ ಬ್ರಹ್ಮಕುಂಭಾಭಿಷೇಕ, ಸಂಜೆ ಉಜಿರೆ ಅಶೋಕ್ ಭಟ್ ನೇತೃತ್ವದಲ್ಲಿ ರಾಮ ರಾಮ ಶ್ರೀ ರಾಮ ಯಕ್ಷಗಾನ ಜರಗಲಿದೆ. ಸಚಿವ ಅಭಯಚಂದ್ರ, ಅಮರನಾಥ ಶೆಟ್ಟಿ, ಕೇಂಜ ಶ್ರೀಧರ ತಂತ್ರಿ, ಹರಿಕೃಷ್ಣ ಪುನರೂರು, ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಮುಂತಾದವರು ಭಾಗವಹಿಸಲಿದ್ದಾರೆ.
ತಾ.9ರಂದು ಬೆಳಗ್ಗೆಯಿಂದ ತಾ.10ರವರೆಗೆ ಅಖಂಡ ಭಜನಾ ಸೇವೆ ಜರಗಲಿದೆ. ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli 07061404
ಲಾರಿ ಹಾಗೂ ರೆಡಿ ಮಿಕ್ಸರ್ ಲಾರಿ ಮುಖಾ ಮುಖಿ ಡಿಕ್ಕಿ

ಕಿನ್ನಿಗೋಳಿ: ಕಿನ್ನಿಗೋಳಿ, ಮೂಡಬಿದ್ರೆ ರಾಜ್ಯ ಹೆದ್ದಾರಿಯ ಐಕಳ ಸಮೀಪ ತಿರುವು ರಸ್ತೆ ಬಳಿ ಲಾರಿ ಮತ್ತು ರೆಡಿಮಿಕ್ಸ್ ವಾಹನವು ಮುಖಾಮುಕಿ ಡಿಕ್ಕಿಯಾದ ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ...

Close