ಗುತ್ತಕಾಡು ಕಾಂಕ್ರೀಟ್ ರಸ್ತೆ ಕೆಸರುಮಯ

ಕಿನ್ನಿಗೋಳಿ: ಗುರುವಾರ ಸುರಿದ ಮೊದಲ ಮಳೆಗೆ ಕಾಂಕ್ರೀಟ್ ರಸ್ತೆಯು ಕೆಸರುಮಯವಾಗಿ ಹಲವಾರು ದ್ವಿಚಕ್ರವಾಹನಗಳು ಆಯ ತಪ್ಪಿ ಬಿದ್ದ ಘಟನೆ ಕಿನ್ನಿಗೋಳಿ ಸಮೀಪದ ಗುತ್ತಕಾಡು ಕುದಮ ಲಚ್ಚಿಲ್ ಬಳಿಯ ಚೆನ್ನಯ್ಯ ಬೆಟ್ಟುವಿನಲ್ಲಿ ನಡೆದಿದೆ. ಕಿನ್ನಿಗೋಳಿಯಿಂದ ಗುತ್ತಕಾಡು ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಯು ತಾಳಿಪಾಡಿ ಚೆನ್ನಯ್ಯ ಬೆಟ್ಟು ಸೇತುವೆ ಬಳಿ ಗುರುವಾರ ಸುರಿದ ಮಳೆಗೆ ಸಂಪೂರ್ಣ ಕೆಸರುಮಯವಾಗಿದೆ ಅಲ್ಲದೆ ನಿನ್ನೆ ರಾತ್ರಿ ಇಲ್ಲಿ ಸಂಚರಿಸುವ ಕೆಲವು ದ್ವಿಚಕ್ರ ವಾಹನಗಳು ಅಯತಪ್ಪಿ ಬಿದ್ದ ಘಟನೆ ನಡೆದಿದೆ, ಇಲ್ಲಿ ದಿನನಿತ್ಯ ಹಲವಾರು ವಾಹನಗಳು ಬಸ್ಸುಗಳು ಸಂಚರಿಸುತ್ತಿದ್ದು ಇಲ್ಲಿ ವಾಹನ ಚಾಲನೆಗೆ ಪರದಾಡುವಂತಾಗಿದೆ ರಸ್ತೆಯ ಎರಡು ಬದಿಯಲ್ಲಿ ಸರಿಯಾದ ಚರಂಡಿಯಿದ್ದರೂ ಮಳೆಯ ನೀರು ಸಂಪೂರ್ಣವಾಗಿ ರಸ್ತೆಯಲ್ಲಿ ಹರಿಯುತ್ತಿದ್ದು ಇದರ ಜೊತೆ ಮಣ್ಣು ಸೇರಿ ರಸ್ತೆ ಕೆಸರುಮಯವಾಗಿದೆ. ಮಳೆಗಾಲ ಆರಂಭವಾದರೆ ಸ್ಥಿತಿ ಇನ್ನೂ ಚಿಂತಾಜನಕವಾಗುತ್ತದೆ.

ಕಳೆದ 8 ವರ್ಷಗಳಿಂದ ಈ ಸಮಸ್ಯೆಯಿದ್ದು ವಿಪರೀತವಿದ್ದು ಕಾಂಕ್ರೀಟ್ ರಸ್ತೆ ಆದ ನಂತರವೂ ಮುಂದುವರಿದಿರುವುದು ವಿಪರ‍್ಯಾಸ. ಸಮೀಪದಲ್ಲೆ ಇರುವ ಮೋರಿ ಸಂಪೂರ್ಣ ಮುಚ್ಚಿ ಹೋಗಿದ್ದು ನೀರು ಅಲ್ಲೇ ಶೇಖರಣೆಗೊಂಡು ರಸ್ತೆ ತುಂಬಾ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗುವ ಸಂಭಾವವಿದೆ. ಪೂರ್ವ ದಿಕ್ಕಿನ ಉರ್ನಡ್ಕ ಜಮೀನುಗಳಲ್ಲಿ ಹರಿಯುವ ಮಳೆಯ ನೀರಿನ ಜೊತೆ ಮಣ್ಣು ಸಮೇತ ಕೊಚ್ಚಿಕೊಂಡು ಈ ರಸ್ತೆಯಲ್ಲಿ ನಿಲ್ಲುತ್ತದೆ. ಚರಂಡಿ ಹೂಳು ತೆಗೆದು ಸಮಸ್ಯೆ ಬಗೆಹರಿಸಬೇಕು.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಕಸವನ್ನು ಸ್ವಚ್ಛ ಮಾಡುವ ಮೂಲಕ ನಾಗರಿಕರ ಹಿತ ಕಾಪಾಡಬೇಕು.
ಇದರ ಬಗ್ಗೆ ಸ್ಥಳೀಯ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಮತ್ತು ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ, ಅದಷ್ಟು ಬೇಗ ಸಂಬಂದಪಟ್ಟವರು ಇದರ ಬಗ್ಗೆ ಗಮನ ಹರಿಸಬೇಕಾಗಬೇಕಾಗಿದೆ.

Kinnigoli 07061401 Kinnigoli 07061402 Kinnigoli 07061403

Comments

comments

Comments are closed.

Read previous post:
Kinnigoli 07061405
ಕಿನ್ನಿಗೋಳಿ ವಿಶ್ವ ಪರಿಸರ ದಿನಾಚರಣೆ

 ಕಿನ್ನಿಗೋಳಿ: ಮಾನವನ ಸ್ವಾರ್ಥಯುಕ್ತ ಜೀವನದಿಂದಾಗಿ ಪ್ರಕೃತಿ ನಾಶವಾಗುತ್ತಿದ್ದು ಮುಂದಿನ ದಿನಗಳಲ್ಲಿ ಶುದ್ಧ ಗಾಳಿ, ಶುದ್ಧ ಜಲಕ್ಕಾಗಿ ಸಸ್ಯ ಮರಗಳನ್ನು ಬೆಳಸಲೇಬೇಕಾದ ಅನಿವಾರ್ಯತೆ ಇದೆ. ಆದುದರಿಂದ ಶಾಲಾ ಮಕ್ಕಳಿಗೆ ಸೂಕ್ತ...

Close