ದಾಮಸಕಟ್ಟೆ ಮೋರಿ ಚರಂಡಿ ಕುಸಿಯುವ ಸ್ಥಿತಿ

ಕಿನ್ನಿಗೋಳಿ: ಬಜಪೆ-ಮುಂಡ್ಕೂರು- ಆತ್ರಾಡಿ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದಿನಿಂದ ರಸ್ತೆಯ ಇಕ್ಕೆಲಗಳು ಎತ್ತರದಲ್ಲಿದ್ದರಿಂದ ಮಳೆಗಾಲದಲ್ಲಿ ಒಂದೇ ಗಂಟೆ ಸುರಿಯುವ ಜಡಿ ಮಳೆಗೆ ಸುಮಾರು ಒಂದೂವರೆ ಅಡಿಗಳಷ್ಟು ನೀರು ನಿಂತು ಕೃತಕ ನೆರೆ ತಲೆದೋರುವಂತಹ ಪರಿಸ್ಥಿತಿ ಸಮಸ್ಯೆ ಇತ್ತು. ಮೂಲ್ಕಿ ಮೂಡಬಿದ್ರಿ ಶಾಸಕ ಅಭಯಚಂದ್ರ ಜೈನ್ ಅವರ ಮುತುವರ್ಜಿಯಲ್ಲಿ ಶಾಶ್ವತ ಮುಕ್ತಿಗಾಗಿ ಯೋಜನೆ ಅನುಷ್ಠಾನಗೊಂಡು ರಸ್ತೆ ಎತ್ತರ ಮಾಡಿ ನೀರು ಸರಾಗ ಹರಿದು ಹೋಗುವಂತೆ ಉತ್ತಮ ಮೋರಿ ರಚಿಸಿ ಸುಗಮ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು. ಈದೀಗ ಮೋರಿಯ ಮೂಲಕ ಹಾದು ಹೋಗುವ ಚರಂಡಿಯನ್ನು ಕೆಡವಿಹಾಕಲಾಗಿದ್ದು ಮುಖ್ಯ ರಸ್ತೆಯನ್ನು ಸಂರ್ಪಕಿಸುವ ಕೂಡು ರಸ್ತೆಯೂ ಕುಸಿದು ನೀರು ಪಾಲಾಗಿ ಬೀಳುವ ಸ್ಥಿತಿಯಲ್ಲಿದ್ದು ಪರಿಸರದ ಮನೆಗಳಿಗೆ ಕೃತಕ ನೆರೆ ನೀರು ನುಗ್ಗುವ ಸಂಭವವಿದೆ. ಕಳೆದ ವರ್ಷ ನೀರು ಸರಾಗ ಹರಿದು ಹೋಗುವಂತೆ ಸುಮಾರು ಒಂದು ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಲಾಗಿದೆ. ಈಗ ಚರಂಡಿಯಲ್ಲಿ ಕೆಸರು ಮಣ್ಣು ತುಂಬಿದ್ದರಿಂದ ಹಾಗೂ ಅವೈಜ್ಞಾವಿಕವಾಗಿ ಕೆಡವಲ್ಪಟ್ಟಿರುವುದರಿಂದ ನೀರು ತಡೆಹಿಡಿಯಲ್ಪಡುವಂತಾಗಿದೆ.
ರಸ್ತೆಯನ್ನು ಎತ್ತರಿಸುವಾಗ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಕೂಡುರಸ್ತೆಯಲ್ಲಿ ಕೂಡಾ ಮಣ್ಣು ತುಂಬಿ ಎತ್ತರಿಸಲಾಗಿದೆ. ಆದರೇ ಮೋರಿಯ ಬದಿಗೆ ಕಲ್ಲು ಕಟ್ಟದೆ ಇರುವುದರಿಂದ ಮಳೆಗಾಲದಲ್ಲಿ ಮೋರಿಯಲ್ಲಿ ಹರಿಯುವ ನೀರಿನ ಒತ್ತಡಕ್ಕೆ ರಸ್ತೆ ಕುಸಿಯುವ ಎಲ್ಲಾ ಸಂಭವನೀಯತೆ ಇದೆ. ಗುರುವಾರ ರಾತ್ರಿ ಸುರಿದ ಮಳೆಗೆ ಮಣ್ಣು ಕೊಚ್ಚಿ ಹೋಗಿದೆ ಎಂದು ಪರಿಸರದ ಮನೆಯ ಪ್ರವೀಣ್ ಸಾಲ್ಯಾನ್ ತಿಳಿಸಿದ್ದಾರೆ. ಈ ಎಲ್ಲಾ ಸಮಸ್ಯೆಗೆ ಐಕಳ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆ ತತ್‌ಕ್ಷಣ ಸ್ಪಂದನೆ ನೀಡಬೇಕಾಗಿದೆ. ಸರಕಾರದ ಹಣವನ್ನು ಈ ರೀತಿ ವ್ಯರ್ಥವಾಗದಂತೆ ನೋಡಿಕೊಳ್ಳಾಬೇಕಾಗಿದೆ.

Kinnigoli 07061414 Kinnigoli 07061415

Comments

comments

Comments are closed.

Read previous post:
ಜೂ. 8 ಭಾನುವಾರ ಮೂಳೆ ಸಾಂದ್ರತಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಮತ್ತು ಸಂಜೀವಿನಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಜೂನ್. 8 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರ ತನಕ ಕಿನ್ನಿಗೋಳಿ ಕನ್ಸೆಟ್ಟಾ...

Close