ನಿಯಮಿತ ಶಿಕ್ಷಣದಿಂದ ಜೀವನದಲ್ಲಿ ಯಶಸ್ಸು

ಕಿನ್ನಿಗೋಳಿ: ಶಿಸ್ತು ಸಂಸ್ಕಾರದ ನಿಯಮಿತ ಶಿಕ್ಷಣ ಹಾಗೂ ಆರೋಗ್ಯಭರಿತ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರೊಸಾರಿಯೊ ಹೇಳಿದರು.
ಶನಿವಾರ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಶಾಲಾ ಕಾರ್ಯದರ್ಶಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಶರತ್ ಶೆಟ್ಟಿ, ಖಜಾಂಜಿ ಸತೀಶ್ಚಂದ್ರ ಶೆಟ್ಟಿ, ಶೇಷರಾಮ ಶೆಟ್ಟಿ, ವಿಲಿಯಂ ಸಿಕ್ವೇರಾ, ಯಶವಂತ ಐಕಳ, ಕೇಶವ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಗಿಲ್ಬರ್ಟ್ ಡಿ’ಸೋಜಾ ಸ್ವಾಗತಿಸಿ, ಪ್ರಣಿಲ್ ಹೆಗ್ಡೆ, ವಂದಿಸಿದರು. ಗಂಗಾ ದೇವಿ ಕಾರ್ಯಕ್ರಮ ನಿರೂಪಿಸಿದರು.

Kinnigoli 07061406 Kinnigoli 07061407 Kinnigoli 07061408

 

Comments

comments

Comments are closed.

Read previous post:
Kinnigoli 07061402
ಗುತ್ತಕಾಡು ಕಾಂಕ್ರೀಟ್ ರಸ್ತೆ ಕೆಸರುಮಯ

ಕಿನ್ನಿಗೋಳಿ: ಗುರುವಾರ ಸುರಿದ ಮೊದಲ ಮಳೆಗೆ ಕಾಂಕ್ರೀಟ್ ರಸ್ತೆಯು ಕೆಸರುಮಯವಾಗಿ ಹಲವಾರು ದ್ವಿಚಕ್ರವಾಹನಗಳು ಆಯ ತಪ್ಪಿ ಬಿದ್ದ ಘಟನೆ ಕಿನ್ನಿಗೋಳಿ ಸಮೀಪದ ಗುತ್ತಕಾಡು ಕುದಮ ಲಚ್ಚಿಲ್ ಬಳಿಯ ಚೆನ್ನಯ್ಯ...

Close