ಕಿನ್ನಿಗೋಳಿ ವಿಶ್ವ ಪರಿಸರ ದಿನಾಚರಣೆ

 ಕಿನ್ನಿಗೋಳಿ: ಮಾನವನ ಸ್ವಾರ್ಥಯುಕ್ತ ಜೀವನದಿಂದಾಗಿ ಪ್ರಕೃತಿ ನಾಶವಾಗುತ್ತಿದ್ದು ಮುಂದಿನ ದಿನಗಳಲ್ಲಿ ಶುದ್ಧ ಗಾಳಿ, ಶುದ್ಧ ಜಲಕ್ಕಾಗಿ ಸಸ್ಯ ಮರಗಳನ್ನು ಬೆಳಸಲೇಬೇಕಾದ ಅನಿವಾರ್ಯತೆ ಇದೆ. ಆದುದರಿಂದ ಶಾಲಾ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ ಎಂದು ಪರಿಸರವಾದಿ ಕಿಶೋರ್ ಪೈ ಹೇಳಿದರು.
ಗೋಳಿಜೋರ ಶ್ರೀರಾಮ ಯುವಕ ವೃಂದ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಜಂಟೀ ಆಶ್ರಯದಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಸುಧಾಕರ ಶೆಟ್ಟಿ , ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಪಿಡಿಒ ಅರುಣ ಪ್ರದೀಪ್ ಡಿಸೋಜ, ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಭಗಿನಿ ಅರುಣಾ ವಂದಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli 07061405

Comments

comments

Comments are closed.

Read previous post:
ಹರಿಹರ ರಾಮಭಜನಾ ಮಂದಿರದಲ್ಲಿ ಬ್ರಹ್ಮಕಲಶ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಗೋಳಿಜೋರ ಹರಿಹರ ಶ್ರೀ ರಾಮ ಭಜನಾ ಮಂದಿರದ ನವೀಕೃತ ಆಲಯದ ಸಮರ್ಪಣೆ ಹಾಗೂ ಶ್ರೀ ಕೋದಂಡರಾಮ ದೇವರ ಬಿಂಬ ಪುನಪ್ರತಿಷ್ಟೆ, ಬ್ರಹ್ಮಕಲಶೋತ್ಸವ ದಿನಾಂಕ 7ರಿಂದ...

Close