ಅಂಗರಗುಡ್ಡೆ ರಸ್ತೆ ಚರಂಡಿ ನಾದುರಸ್ಥಿ

ಕಿನ್ನಿಗೋಳಿ : ಎಲ್ಲಾ ಕಡೆಗಳಲ್ಲಿಯೂ ರಸ್ತೆಯ ಬದಿಯಲ್ಲಿ ಚರಂಡಿಗಳಿದ್ದರೆ ಮುಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಅಂಗರಗುಡ್ಡೆ ಎಂಬಲ್ಲಿ ರಸ್ತೆ ಮಧ್ಯದಲ್ಲಿ ಅಲ್ಲಲ್ಲಿ ಚರಂಡಿ ಇದೆ. ಅಂಗರಗುಡ್ಡೆ ಗ್ರಾಮಸ್ಥರು ಹಲವಾರು ತಿಂಗಳಿನಿಂದ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಅಂಗರಗುಡ್ಡೆಯಲ್ಲಿ ನೂರಾರು ಮನೆಗಳಿದ್ದು ಸಂಪರ್ಕ ರಸ್ತೆಗಳು ತೀರಾ ಹದಗೆಟ್ಟಿದ್ದು ರಾತ್ರಿ ಹೊತ್ತು ಈ ರಸ್ತೆಯಲ್ಲಿ ಸಂಚರಿಸುವುದು ಒಂದು ಸಾಹಸವೇ ಸರಿ.
ರಸ್ತೆಯ ಎರಡೂ ಪಕ್ಕಗಳಲ್ಲಿ ಚರಂಡಿಗಳಿದ್ದರೂ ಸಂಪೂರ್ಣವಾಗಿ ಕಸ ಮಣ್ಣು ತುಂಬಿದ್ದು ಮಳೆಯ ನೀರು ರಸ್ತೆಯಲ್ಲಿಯೇ ಹರಿದು ರಸ್ತೆಯಲ್ಲಿಯೇ ಚರಂಡಿ ನಿರ್ಮಾಣವಾಗಿದೆ. ಹಲವಾರು ವರ್ಷಗಳಿಂದ ಈ ಸಮಸ್ಯೆಗಳು ಕಾಡುತ್ತಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮಾತ್ರ ದಿವ್ಯ ಮೌನ ತಳೆದಿದೆ ಅಲ್ಲದೆ ಈ ಬಗ್ಗೆ ಪಂಚಾಯಿತಿಗೆ ಹಲವಾರು ಭಾರಿ ಮೌಖಿಕ ಹಾಗೂ ಲಿಖಿತವಾಗಿ ದೂರು ನೀಡಿದರೂ ಪ್ರಯೋಜನ ಕಂಡಿಲ್ಲ ಎಂಬುದು ಸ್ಥಳೀಯರ ಅಳಲು.
ಈ ಬಾಗದಲ್ಲಿ ಕುಡಿಯುವ ನೀರಿನ ಯೋಜನೆಗೆ ಪೈಪ್ ಕಾಮಗಾರಿಗಾಗಿ ಗುಂಡಿಗಳನ್ನು ತೋಡಿದ್ದು, ಅದನ್ನು ಸರಿಯಾಗಿ ಮುಚ್ಚದೆ ಜನರಿಗೆ ತುಂಬಾ ತೊಂದರೆಯಾಗುತ್ತಿದೆ, ಇಂತಹ ಸುಮಾರು ೨೫ಕ್ಕಿಂತಲೂ ಹೆಚ್ಚು ಗುಂಡಿಗಳು ಅಲ್ಲಲ್ಲಿ ಕಂಡು ಬರುತ್ತಿವೆ ಎಂದು ಸ್ಥಳಿಯರು ಆರೋಪಿಸುತ್ತಾರೆ.
ಇತ್ತೀಚೆಗೆ ಸ್ಥಳೀಯ ನಿವಾಸಿ ಭೋಜ ಆಚಾರ್ಯ ಅವರು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆಯನ್ನು ಸರಿಪಡಿಸಿದ್ದು ಮೊದಲ ಮಳೆಯ ಆರ್ಭಟಕ್ಕೆ ಈಗಾಗಲೇ ರಸ್ತೆ ಹಾಳಾಗಿದೆ. ಅವರ ಮನೆಯ ಪಕ್ಕ ಅನೇಕ ವಾಹನಗಳು ನಿಯಂತ್ರಣ ತಪ್ಪಿ ಬಿದ್ದಿವೆ. ದಾರಿಹೋಕರೂ ಕೂಡಾ ಬಿದ್ದು ಗಾಯಗೊಂಡಿದ್ದಾರೆ.
ಮೋರಿಗಳನ್ನು ಪಂಚಾಯಿತಿ ಅಭಿವೃದ್ದಿ ಪಡಿಸಿದರೂ ಬೇಸಿಗೆಗಾಲದಲ್ಲಿ ಕಸಕಡ್ಡಿಗಳನ್ನು ತೆಗೆಯದೆ ಅದು ಸಂಪೂರ್ಣವಾಗಿ ಮುಚ್ಚಿಹೋಗಿದೆ. ಮಳೆಗಾಲದಲ್ಲಿ ಇಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಸಂಭಾವಗಳು ಹೆಚ್ಚಾಗಿವೆ. ಕೆಲವು ಸ್ಥಳಿಯ ನಿವಾಸಿಗಳು ತಮ್ಮ ಮನೆಯ ಬದಿಯಲ್ಲಿ ಅವರಣ ಗೋಡೆ ನಿರ್ಮಿಸಿದ್ದರೂ ಸೂಕ್ತ ಚರಂಡಿಗೆ ವ್ಯವಸ್ಥೆ ಕಲ್ಪಿಸದ ಕಾರಣ ನೀರು ಸರಾಗವಾಗಿ ಹರಿದು ಹೋಗಲು ಇನ್ನಷ್ಟು ತೊಂದರೆಯಾಗುತ್ತಿದೆ.
ಸ್ಥಳೀಯ ಗ್ರಾಮಸ್ಥರು ಸುಮಾರು ಎರಡು ತಿಂಗಳು ಮೊದಲೇ ಪಂಚಾಯಿತಿಗೆ ಮನವಿ ನೀಡಿದಾಗ ಪಂಚಾಯಿತಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಲೋಕಸಭಾ ಚುನಾವಣ ನಂತರ ಸರಿಪಡಿಸುವುದಾಗಿ ಹಿಂಬರಹ ನೀಡಿತ್ತು ಈಗ ಗ್ರಾಮಸ್ಥರು ಪಂಚಾಯಿತಿಯ ಅಸಡ್ಡೆ ಬಗ್ಗೆ ತೀರಾ ನೊಂದು ಹೋರಾಟ ಹಾಗೂ ಪ್ರತಿಭಟನೆ ಬಗ್ಗೆ ಯೋಚಿಸಿದ್ದಾರೆ.
ಮುಂದಿನ ಕ್ರಿಯಾಯೋಜನೆಯಲ್ಲಾದರೂ ರಸ್ತೆ ದುರಸ್ಥಿ ಹಾಗೂ ಚರಂಡಿ ನಿರ್ವಹಣೆ ಬಗ್ಗೆ ಅನುದಾನ ಇರಿಸುವ ಭರವಸೆ ಗ್ರಾಮಸ್ಥರು ಹೊಂದಿದ್ದಾರೆ. ನರೇಗಾ ಯೋಜನೆಯಡಿ ಕಾiಗಾರಿ ಮಾಡಬಹುದು ಅಥವಾ ಸೇವಾ ಸಂಸ್ಥೆ, ಸಂಘಗಳು ಈ ಬಗ್ಗೆ ಮುತುವರ್ಜಿ ವಹಿಸಿ ನಮ್ಮ ಗ್ರಾಮ ನಮ್ಮ ರಸ್ತೆ ಧ್ಯೇಯದ ಅರ್ಥವನ್ನು ಸಧ್ಬಳಕೆ ಮಾಡಲಿ ಎಂಬುದು ಹಿರಿಯ ಗ್ರಾಮಸ್ಥರ ಅಂಬೋಣ. ಇನ್ನಾದರೂ ಸಮಸ್ಯೆ ಬೇಗ ಪರಿಹರವಾಗಲಿ ಎಂಬುದೇ ಜನರ ಅಭಿಪ್ರಾಯ.

Kinnigoli-11061405 Kinnigoli-11061406

Comments

comments

Comments are closed.

Read previous post:
Kinnigoli-11061404
ಐಕಳ ಮೇಜು ಕುರ್ಚಿ ಕೊಡುಗೆ

ಕಿನ್ನಿಗೋಳಿ : ಐಕಳ ಕಾಂತಬಾರೆ ಬೂದಬಾರೆ ಸೇವಾ ಟ್ರಸ್ಟ್ ವತಿಯಿಂದ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಸ್ಥಳಂತಗುತ್ತು ಸಂಜೀವ ಶೆಟ್ಟಿ, ಕೃಷ್ಣ...

Close