ಹರಿಹರ ಶ್ರೀ ರಾಮ ಭಜನಾ ಮಂದಿರ ಬ್ರಹ್ಮಕಲಶ

ಕಿನ್ನಿಗೋಳಿ : ಸಮಾಜದ ಬಗ್ಗೆ ಚಿಂತನೆ ಅಗತ್ಯ. ಭಜನೆಯಿಂದ ಏಕಾಗ್ರತೆ ಆತ್ಮಸ್ಥೈರ್ಯ ಹಾಗೂ ಮಾನಸಿಕ ಧೃಡತೆ ಶಾಂತಿಯನ್ನು ಕಂಡುಕೊಳ್ಳಬಹುದು. ಎಂದು ಯುವಜನಾ ಸೇವಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಗೋಳಿಜೋರ ರಾಮನಗರದಲ್ಲಿ ಹರಿಹರ ಶ್ರೀ ರಾಮ ಭಜನಾ ಮಂದಿರದ ನವೀಕೃತ ಆಲಯ ಸಮರ್ಪಣೆ ಹಾಗೂ ಶ್ರೀ ಕೋದಂಡರಾಮ ದೇವರ ಬಿಂಬ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕೊಲಕಾಡಿ ವಾದಿರಾಜ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಪಂಚಾಯಿತಿ ಸದಸ್ಯರಾದ ಯಜ್ಞಾತ ಆಚಾರ್ಯ, ಫಿಲೋಮಿನಾ ಸಿಕ್ವೇರಾ, ಉದ್ಯಮಿಗಳಾದ ಧನಂಜಯ ಶೆಟ್ಟಿಗಾರ್, ತ್ಯಾಗರಾಜ ಆಚಾರ್ಯ, ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿಗಾರ್, ಬಾರ್ಕೂರು ಅರಣ್ಯಾಧಿಕಾರಿ ಹರೀಶ್ ಕೆ., ಆಡಳಿತ ಮಂಡಳಿ ಅಧ್ಯಕ್ಷ ಶಂಕರ ಕೆ. ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಅವರು ಪ್ರಸ್ತಾವನೆಗೈದರು. ಶಂಕರ ಮಾಸ್ಟರ್ ಸ್ವಾಗತಿಸಿದರು. ಪ್ರಕಾಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-11061401 Kinnigoli-11061402Golijora harihara r

Comments

comments

Comments are closed.

Read previous post:
Kinnigoli 07061414
ದಾಮಸಕಟ್ಟೆ ಮೋರಿ ಚರಂಡಿ ಕುಸಿಯುವ ಸ್ಥಿತಿ

ಕಿನ್ನಿಗೋಳಿ: ಬಜಪೆ-ಮುಂಡ್ಕೂರು- ಆತ್ರಾಡಿ ರಾಜ್ಯ ಹೆದ್ದಾರಿಯ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದಿನಿಂದ ರಸ್ತೆಯ ಇಕ್ಕೆಲಗಳು ಎತ್ತರದಲ್ಲಿದ್ದರಿಂದ ಮಳೆಗಾಲದಲ್ಲಿ ಒಂದೇ ಗಂಟೆ ಸುರಿಯುವ ಜಡಿ ಮಳೆಗೆ ಸುಮಾರು...

Close