ಸಿಡಿಲು ಬಡಿದು ಪಂಪುಗಳು ಹಾನಿ

ಕಿನ್ನಿಗೋಳಿ : ಕಿನ್ನಿಗೋಳಿಯ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಡ್ಕ ಎಂಬಲ್ಲಿ ಬುಧವಾರ ಸಂಜೆ ಸಿಡಿಲು ಬಡಿದಿದ್ದು ಕಾಮಿಲ್ ಸಿಕ್ವೇರಾ ಅವರ ಕಂಗು ಹಾಗೂ ತೆಂಗು ತೋಟಗಳು ಹಾನಿಯಾಗಿವೆ.
ತೋಟದಲ್ಲಿ ಬಾರಿ ಶಬ್ದದೊಂದಿಗೆ ಸಿಡಿಲು ಬಡಿದು ಪಂಪು ಶೆಡ್ಡಿನ ಮೀಟರ್ ಪೆಟ್ಟಿಗೆ ಎರಡು ಸಬ್ ಮರ್ಸಿಬಲ್ ಪಂಪು ಹಾನಿಗೀಡಾಗಿ ವಯರಿಂಗ್ ಸುಟ್ಟು ಹೋಗಿದ್ದು ವಿದ್ಯುತ್ ಉಪಕರಣಗಳು ಸಂಪೂರ್ಣ ನಾಶವಾಗಿವೆ. ಸುಮಾರು 25 ಅಡಿಕೆ ಮರಗಳು ಹಾಗೂ 15 ತೆಂಗಿನಮರಗಳಿಗೆ ಸಿಡಿಲು ಬಡಿದಿದೆ.

Kinnigoli-12061404 Kinnigoli-12061405 Kinnigoli-12061406

Comments

comments

Comments are closed.

Read previous post:
Kinnigoli-12061403
ಎಸ್.ಎಸ್.ಎಫ್. – ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ವಿತರಿಸಲಾಯಿತು. ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ಅಧ್ಯಕ್ಷ ಸಿದ್ಧಿಕ್ ಪುನರೂರು,...

Close