ಸಂಸ್ಕಾರಭರಿತ ಶಿಕ್ಷಣ ಮುಖ್ಯ

ಕಿನ್ನಿಗೋಳಿ : ಸಂಸ್ಕಾರಭರಿತ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಸನ್ನಡತೆಯ ಭವಿಷ್ಯಯುಳ್ಳ ಸತ್ಪ್ರಜೆಗಳನ್ನು ರೂಪಿಸಬಹುದು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಎಂದು ಹೇಳಿದರು
ಕಿನ್ನಿಗೋಳಿಯ ಗುತ್ತಕಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಮುಖ್ಯ ಶಿಕ್ಷಕಿ ಉಷಾ ರಾಮ್ ದಾಸ್ ಅವರ ವಿದಾಯ ಕೂಟ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಎ.ಪಿ.ಯಂ.ಸಿ. ಸದಸ್ಯ ಪ್ರಮೋದ್ ಕುಮಾರ್, ಯುಗಪುರುಷದ ಭುವನಾಭಿರಾಮ ಉಡುಪ, ವಿಲಿಯಂ ಸಿಕ್ವೇರಾ, ಸಿ.ಆರ್.ಪಿ ಜಗದೀಶ್ ನಾವಡ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ಕುಸುಮಾ, ನಿವೃತ್ತ ಶಿಕ್ಷಕ ರಾಮದಾಸ್, ಹರಿ ರಾವ್, ಕುಸುಮ, ತನುಜ, ಅನುರಾಧ ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.
ಟಿ.ಎಚ್. ಮಯ್ಯದ್ದಿ ಸ್ವಾಗತಿಸಿದರು. ದಿವಾಕರ್ ಕರ್ಕೆರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-15061402

Comments

comments

Comments are closed.

Read previous post:
Kinnigoli-13061402
ರಾಜರತ್ನಪುರ : ಭಜನ ಮಂಗಲೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ 3ನೇ ವರ್ಷದ ಭಜನಾ ಮಂಗಲೋತ್ಸವ ಶುಕ್ರವಾರ ನಡೆಯಿತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ಕಾರ್ಯಕ್ರಮವನ್ನು ಹಿರಿಯರಾದ ವಾಸುದೇವ ರಾಮ...

Close