ಉತ್ತಮ ಭವಿಷ್ಯ ರೂಪಿಸಲು ಶಿಕ್ಷಣ ಅಗತ್ಯ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಶೈಕ್ಷಣಿಕವಾಗಿ ಹುರಿದುಂಬಿಸಿ ಉತ್ತಮ ಭವಿಷ್ಯ ರೂಪಿಸಲು ಸಹಾಯ ಮಾಡಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ತಾಳಿಪಾಡಿ ಪುನರೂರು ಶ್ರೀ ವೀರಭದ್ರ ಯುವಕ ಮಂಡಲ ಹಾಗೂ ಮಹಿಳಾ ಘಟಕದ ಜಂಟೀ ಆಶ್ರಯದಲ್ಲಿ ಶನಿವಾರ ಶಿಮಂತೂರು ಶ್ರೀ ಶಾರದಾ ಫ್ರೌಢ ಶಾಲೆಯಲ್ಲಿ 22ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿ ವೇತನ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಶಾಖಾ ಪ್ರಬಂಧಕ ಬಿ. ಆರ್ ಶೆಟ್ಟಿಗಾರ್, ಕಿನ್ನಿಗೋಳಿ ಶಾಖಾ ಪ್ರಬಂಧಕ ಕೇಶವ ನಾಯ್ಕ್, ಉದ್ಯಮಿ ಶ್ಯಾಮಪ್ರಸಾದ್ ಮುದ್ರಾಜೆ ಪುತ್ತೂರು, ಶ್ರೀ ಶಾರದಾ ಫ್ರೌಢಶಾಲಾ ಅದ್ಯಾಪಕ ಉಮೇಶ ಎನ್. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಂ.ಜಿ. ಶಿವರುದ್ರಪ್ಪ ಉಪಸ್ಥಿತರಿದ್ದರು. ಹರಿರಾಜ್ ಕುಜಿಂಗಿರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15061403

Comments

comments

Comments are closed.

Read previous post:
Kinnigoli-15061401
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ನಡುಗೋಡು ಸರಕಾರಿ ಫ್ರೌಢ ಶಾಲೆಯ ಎಸ್. ಎಸ್.ಎಲ್. ಸಿ. ಯಲ್ಲಿ ನೂರು ಶೇಕಡ ಪಲಿತಾಂಶ ಪಡೆದಿದ್ದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶನಿವಾರ...

Close