ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು

ಕಿನ್ನಿಗೋಳಿ : ಪ್ರೀತಿ ವಿಶ್ವಾಸದ ಜೊತೆಗೆ ಸಮಾಜದ ಏಳಿಗೆಗಾಗಿ ಸೇವೆ ನಡೆಸುವ ಮೂಲಕ ಎಲ್ಲಾ ಜನರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದಾಗ ದೇಶದ ಉನ್ನತಿ ಸಾಧ್ಯ ಎಂದು ಪಡುಬಿದ್ರಿಯ ಎಂ.ಡಿ. ಅಂಚನ್ ಆಯುರ್ವೇದ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಡಾ| ಎನ್. ಟಿ. ಅಂಚನ್ ಹೇಳಿದರು.
ಕೊಲ್ಲೂರು ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ| ಮುರಳೀಧರ ಹಾಗೂ ಧರ್ಮಪತ್ನಿ ಡಾ| ವಿದ್ಯಾರಾಣಿ ಅವರಿಗೆ ಭಾನುವಾರ ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಪ ಆಡಳಿತಾಧಿಕಾರಿ ಎನ್. ಆರ್. ಬಲ್ಲಾಳ್, ಕೊಲ್ಲೂರು ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶೋಭಾರಾಣಿ, ಊರಿನ ಹಿರಿಯರಾದ ಎಂ. ಚಂದ್ರಶೇಖರ ಭಟ್, ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಧಾಸಿನಿ ಮತ್ತಿತರರು ಉಪಸ್ಥಿತರಿದ್ದರು.
ವಿಲ್ಸನ್ ರೋಡ್ರಿಗಸ್ ಸ್ವಾಗತಿಸಿ, ಐತಪ್ಪ ಸಾಲ್ಯಾನ್ ಪ್ರಸ್ತಾವಿಸಿದರು. ಪೊಂಪೈ ಜೂನಿಯರ್ ಕಾಲೇಜು ಭಾಷ ಸಹ ಶಿಕ್ಷಕ ಲಕ್ಷ್ಮೀಶ ಎನ್. ಶಾಸ್ತ್ರಿ ಅಭಿನಂಧನಾ ಭಾಷಣಗೈದರು. ಎಲ್ಲಪ್ಪ ಸಾಲ್ಯಾನ್ ವಂದಿಸಿ ನ್ಯಾಯವಾದಿ ಶಶಿಧರ ಅಡ್ಕತ್ತಾಯ ಕಾರ್ಯಕ್ರಮ ನಿರೂಪಿಸಿದರು.

Kinnigoli-16061401

 

Comments

comments

Comments are closed.

Read previous post:
Kinnigoli-15061404
ಕಿರೆಂ ಉಚಿತ ಆರೋಗ್ಯ ತಪಾಸಣೆ

ಕಿನ್ನಿಗೋಳಿ : ಜೀವನ ಸುಸಾಂಗವಾಗಿ ಸಾಗಲು ಆರೋಗ್ಯ ಬಹು ಮುಖ್ಯ. ನಿಯಮಿತ ತಪಾಸಣೆಯ ಅರಿವು ಜನರಲ್ಲಿ ಸೇವಾ ಸಂಸ್ಥೆಗಳು ಮಾಡಬೇಕಾಗಿದೆ. ದಾಮಸ್ ಕಟ್ಟೆ ಕಿರೆಂ ಚರ್ಚ್ ಪ್ರಧಾನ ಧರ್ಮಗುರು...

Close