ಜನಸ್ಪಂದನೆಯೇ ಭಾರತ್ ಬ್ಯಾಂಕ್‌ನ ಧ್ಯೇಯ

ಮೂಲ್ಕಿ:ಆರ್ಥಿಕ ಸಂಸ್ಥೆಗಳು ಕೇವಲ ಸಾಲ ಕೊಟ್ಟ ನಂತರ ಎಲ್ಲವೂ ಮುಗಿಯುವುದಿಲ್ಲ ಬದಲಾಗಿ ಗ್ರಾಹಕನ ಸಾಲ ನೀಡುವಿಕೆಯ ನಂತರ ಎಲ್ಲಾ ಆರ್ಥಿಕ ವ್ಯವಹಾರಕ್ಕೆ ಸ್ಪಂದನೆ ನೀಡುವ ಮೂಲಕ ಸಹಕಾರ ನೀಡುತ್ತಿರಬೇಕು, ಈ ನೀತಿಯನ್ನು ಅನುಸರಿಸಿದ್ದರಿಂದ ಜನಸ್ಪಂದನೆಯ ಭಾರತ್ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ಜನ ಮಾನಸದಿಂದ ಇಂದು ಬೆಳಿದಿದೆ ಎಂದು ಭಾರತ್ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕ ಗಂಗಾಧರ ಪೂಜಾರಿ ಹೇಳಿದರು.

ಅವರು ಮೂಲ್ಕಿಯ ಭಾರತ್ ಬ್ಯಾಂಕ್‌ನ ಎರಡನೇ ವರ್ಷದ ಸಂಭ್ರಮಕ್ಕೆ ಶನಿವಾರ ಬ್ಯಾಂಕಿನ ಶಾಖಾ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಬ್ಯಾಂಕಿನ ಮುಖ್ಯ ಪ್ರಬಂಧಕ ಬಾಲಕೃಷ್ಣ ಕರ್ಕೇರ ಅಧ್ಯಕ್ಷತೆಯನ್ನು ವಹಿಸಿದ್ದರು. ದ್ವಿತೀಯ ವರ್ಷದ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಗ್ರಾಹಕರೊಂದಿಗೆ ಸಾಮೂಹಿಕವಾಗಿ ಸಂಭ್ರಮ ಆಚರಿಸಲಾಯಿತು.
ಬ್ಯಾಂಕಿನ ಶಾಖಾಧಿಕಾರಿ ಲಕ್ಷ್ಮೀ ನಾರಾಯಣ ಸಾಲಿಯಾನ್, ಹಿರಿಯ ಗ್ರಾಹಕರಾದ ಎಚ್.ಬಿ.ಪೂಜಾರಿ, ಶೇಖಬ್ಬ ಕೋಟೆ, ಹರಿಶ್ಚಂದ್ರ ಕೋಟ್ಯಾನ್, ಯದೀಶ್ ಅಮಿನ್ ಕೊಕ್ಕರ್‌ಕಲ್, ಹರಿಶ್ಚಂದ್ರ ಸಾಲಿಯಾನ್, ಅಜಿತ್ ಕುಮಾರ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಮಹಮ್ಮದ್ ಇಕ್ಬಾಲ್ ಶೇಖ್, ಯೂಸಫ್, ನಾಗಭೂಷಣ್, ಅನಿಲ್ ಬಂಗೇರ, ದೊಂಬ ಪೂಜಾರಿ, ಯೋಗೀಶ್ ಕೋಟ್ಯಾನ್, ವಿಠಲ ಅಮಿನ್, ಸುಧೀರ್ ಕರ್ಕೇರ, ಪವನ್ ಅಮಿನ್, ಚಂದ್ರಶೇಖರ ಶಾಂತಿ, ಲೋಕೇಶ್ ಅಮಿನ್, ಎಮ್.ಎಸ್.ಅಮಿನ್ ಇದ್ದರು.

Kinnigoli-16061408

Narendra Kerekadu

 

Comments

comments

Comments are closed.

Read previous post:
Kinnigoli-16061406
ನಗ ನಗದು ಕಳವು

ಬಜಪೆ: ಬಜಪೆಯ ಸಮೀಪದ ಧೂಮಾವತಿ ನಗರದಲ್ಲಿ ಭಾನುವಾರ ತಡ ರಾತ್ರಿ ಕಳ್ಳರು ನುಗ್ಗಿ ನಗ ನಗದು ದೋಚಿದ ಘಟನೆ ಸಂಭವಿಸಿದೆ. ಧೂಮವತಿನಗರದ ದಯಾನಂದ ಕೋಟ್ಯಾನ್ ಎಂಬುವವರ ಮನೆಗೆ...

Close