ನಗ ನಗದು ಕಳವು

ಬಜಪೆ: ಬಜಪೆಯ ಸಮೀಪದ ಧೂಮಾವತಿ ನಗರದಲ್ಲಿ ಭಾನುವಾರ ತಡ ರಾತ್ರಿ ಕಳ್ಳರು ನುಗ್ಗಿ ನಗ ನಗದು ದೋಚಿದ ಘಟನೆ ಸಂಭವಿಸಿದೆ. ಧೂಮವತಿನಗರದ ದಯಾನಂದ ಕೋಟ್ಯಾನ್ ಎಂಬುವವರ ಮನೆಗೆ ನಿನ್ನೆ ತಡ ರಾತ್ರಿ ನುಗ್ಗಿ ಕಳ್ಳರು ಮನೆಯಲ್ಲಿದ್ದ ಚಿನ್ನ , ನಗದು, ಟಿ.ವಿ ಮತ್ತು ಇನ್ನಿತರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ದಯಾನಂದ ಕೊಟ್ಯಾನ್ ಖಾಸಗಿ ಕಂಪೆನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ನೌಕರಿ ಮಾಡುತ್ತಿದ್ದು ಹೆಂಡತಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ಈ ಸಂದರ್ಭ ನೋಡಿ ಕಳ್ಳರು ಕಳವು ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳವನ್ನು ಕರೆಸಲಾಗಿದ್ದು ಬಜಪೆ ಪೋಲಿಸರು ಪ್ರಕರಣ ದಾಖಲಿಸಿ ಉನ್ನತ ತನಿಖೆ ನಡೆಸುತ್ತಿದ್ದಾರೆ.

Kinnigoli-16061404 Kinnigoli-16061405 Kinnigoli-16061406 Kinnigoli-16061407

Nishanth Kilenjoor

Comments

comments

Comments are closed.

Read previous post:
Kinnigoli-16061403
ತೋಕೂರು : ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಕಿನ್ನಿಗೋಳಿ : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು,ಪ್ರಾಮಾಣಿಕತೆ,ಹಿರಿಯರಿಗೆ ಗೌರವ ನೀಡುವುದು ಅಲ್ಲದೆ ಕಠಿನ ಪರಿಶ್ರಮದೊಂದಿಗೆ ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತಿ ಪಡೆದು ಶೃದ್ಧೆ ಮತ್ತು ಸಮರ್ಪಣಾಭಾವದಿಂದ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಭವಿಷ್ಯದಲ್ಲಿ...

Close