ಕರ್ನಿರೆ ಕಾರ್ಮಿಕ ಆತ್ಮಹತ್ಯೆ

ಬಳ್ಕುಂಜೆ : ಬಳ್ಕುಂಜೆ  ಗ್ರಾಮದ ಕರ್ನೀರೆ ಕೊಪ್ಪಳ ನಿವಾಸಿ ಅನಿಲ ಕುಮಾರ ಪೂಜಾರಿ(24) ಎಂಬಾತನು ಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಈತ ಬಳ್ಕುಂಜೆ ಶಾಂಭವಿ ನದಿಯಲ್ಲಿ ಮರಳು ತೆಗೆಯುವ ಕಾಯಕ ನಡೆಸುತ್ತಿದ್ದು ಕಳೆದೆರಡು ದಿನಗಳಿಂದ ಕೆಲಸಕ್ಕೆ ಹೋಗದೆ ಮಾನಸಿಕವಾಗಿ ಖಿನ್ನತೆ ಹೊಂದಿ ರಜ ಹಾಕಿದ್ದನು.ಬಡ ಕುಟುಂಬದ ಅನಿಲನ ತಂದೆ ಪಲಿಮಾರಿನ ಹೋಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಮಂಗಳವಾರ ತಾಯಿ ಮತ್ತು ಅಣ್ಣ ಆಸ್ಪತ್ರೆಗೆ ಹೋದ ಸಮಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

comments

Comments are closed.

Read previous post:
Kinnigoli-18061401
ಮೂಲ್ಕಿ ಅಪಘಾತ ಚಾಲಕ ಪಾರು

ಮೂಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಪೆಟ್ರೋಲ್ ಬಂಕ್ ಬಳಿಯಲ್ಲಿ ಮಂಗಳೂರಿನಿಂದ ಗದಗಕ್ಕೆ ಪಾಮೋಲಿನ್ ಎಣ್ಣೆ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಸೋಮವಾರ ರಾತ್ರಿ ಚಾಲಕನ ನಿಯಂತ್ರಣ...

Close