ಮೂಲ್ಕಿ ಅಪಘಾತ ಚಾಲಕ ಪಾರು

ಮೂಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಪೆಟ್ರೋಲ್ ಬಂಕ್ ಬಳಿಯಲ್ಲಿ ಮಂಗಳೂರಿನಿಂದ ಗದಗಕ್ಕೆ ಪಾಮೋಲಿನ್ ಎಣ್ಣೆ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಸೋಮವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಇಳಿದಿದೆ. ಅಪಘಾತದ ರಭಸಕ್ಕೆ ಲಾರಿಗೆ ತುಂಬಾ ಹಾನಿಯಾಗಿದ್ದು ಎಣ್ಣೆ ಲೋಡಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.ವಿರುದ್ದ ದಿಕ್ಕಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿ ಅಪಘಾತವುಂಟಾಗಿದೆ ಎಂದು ಚಾಲಕ ತಿಳಿಸಿದ್ದಾನೆ. ಹೆದ್ದಾರಿ ಕಾಮಗಾರಿಯೇ ಅಫಘಾತಕ್ಕೆ ಕಾರಣವಾಗಿದ್ದು ಕಳೆದ ತಿಂಗಳಿನ ಹಿಂದಿನಿಂದ ಇಲ್ಲಿ ಸರಣಿ ಅಪಘಾತಗಳು ನಡೆಯುತ್ತಿದ್ದು ಇಲಾಖೆಯ ನಿರ್ಲ್ಯಕ್ಷವೇ ಅಫಘಾತಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Kinnigoli-18061401

Puneeth Krishna

Comments

comments

Comments are closed.

Read previous post:
Kinnigoli-16061408
ಜನಸ್ಪಂದನೆಯೇ ಭಾರತ್ ಬ್ಯಾಂಕ್‌ನ ಧ್ಯೇಯ

ಮೂಲ್ಕಿ:ಆರ್ಥಿಕ ಸಂಸ್ಥೆಗಳು ಕೇವಲ ಸಾಲ ಕೊಟ್ಟ ನಂತರ ಎಲ್ಲವೂ ಮುಗಿಯುವುದಿಲ್ಲ ಬದಲಾಗಿ ಗ್ರಾಹಕನ ಸಾಲ ನೀಡುವಿಕೆಯ ನಂತರ ಎಲ್ಲಾ ಆರ್ಥಿಕ ವ್ಯವಹಾರಕ್ಕೆ ಸ್ಪಂದನೆ ನೀಡುವ ಮೂಲಕ ಸಹಕಾರ...

Close