ವಿಶಿಷ್ಟ ಕಬೆತ್ತಿ ದನ

ಬಜಪೆ: ತುಳು ಜಾನಪದ ಸಂಸ್ಕೃತಿಯ ಕೃಷಿ ಪರಂಪರೆಯ ಈಗಲೂ ಕಾಯ್ದುಕೊಂಡಿರುವ ಬಜಪೆ ಸಮೀಪದ ಪಡುಪೆರಾರ ಗ್ರಾಮದ ಕಬೆತ್ತಿಗುತ್ತುವಿನ ಮೋಹನ ಅಮೀನ್ ಅವರ ದನ ಲಕ್ಷ್ಮೀಯ ವಿಶಿಷ್ಟ ಕತೆ.

ಶುಕ್ರವಾರ – ಗೋಧೂಳೀ ಲಗ್ನ…
ಎರಡೂವರೆ ವರ್ಷದ ಕರು ಲಕ್ಷ್ಮೀ ಏಳು ವರ್ಷಗಳ ಹಿಂದೆ ಮೇಯಲು ಬಿಟ್ಟಾಗ ಮನೆ ಮಂದಿಯ ಕಣ್ಣ ಮುಂದೆ ಗೋಚರಿಸಿದರೂ ಮನೆಗೆ ಮಾತ್ರ ಬರದೆ ವರ್ಷ ಕಳೆದ ಬಳಿಕ ನವಮಾಸ ತುಂಬಿದ ತುಂಬು ಗರ್ಭಿಣಿಯಾಗಿ ಲಕ್ಷ್ಮೀ ಶುಕ್ರವಾರ ಸಂಜೆ ಸೀದಾ ಮನೆಯ ಹಟ್ಟಿಗೆ ಬಂದು ಹೆಣ್ಣು ಕರುವಿಗೆ (ಆಶಾ) ಜನ್ಮ ನೀಡಿ ಬಳಿಕ ಕರುವಿಗೂ ಮನೆ ಮಂದಿಗೂ ಹಾಲು ಕೊಡುತ್ತಾ ಮತ್ತೆ ಒಂಭತ್ತು ತಿಂಗಳು ಮಗು ಹಾಗೂ ಮನೆಮಂದಿ ಜತೆಗೇ ಇದ್ದು ಇದ್ದಕ್ಕಿದ್ದಂತೆ ಕಾಣೆಯಾದಳು.
ಅದಾಗಿ ಒಂದೂವರೆ ವರ್ಷದ ಬಳಿಕ ೨೦೧೪ರ ಮೇ ತಿಂಗಳ ಮೂರನೇ ಶುಕ್ರವಾರ ಸಂಜೆ ಮನೆಯ ಹಟ್ಟಿಗೆ ಬಂದು ಒಂದೇ ಗಂಟೆಯಲ್ಲಿ ಉಷಾ ಎಂಬ ಹೆಣ್ಣು ಕರುವಿಗೆ ಜನ್ಮ ನೀಡಿದ್ದಾಳೆ.

ಕಬೆತ್ತಿಗುತ್ತಿನ ಮಹಿಮೆ
ಕಬೆತ್ತಿ ದನ ಹಾಗೂ ಕಬೆತ್ತಿ ಹುಲಿ ಕಬೆತ್ತಿ ಪೆತ್ತ-ಕಬೆತ್ತಿ ಪಿಲಿ ಒಂದಾಗಿ ಆಟವಾಡಿದ ಜಾಗವಿದು ಅನ್ನೋದು ಇಲ್ಲಿ ಪ್ರತೀತಿ. ಆಧುನಿಕತೆ ಬಂದರೂ ದುಗ್ಗಣ ಬೈದರ ವಂಶದವಾರದ ಮೋಹನ್ ಅಮೀನ್ ಅವರು ಈಗಲೂ ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಕಬೆತ್ತಿಗುತ್ತಿನಲ್ಲಿ ಬೃಹತ್ ಕಂಬಳ ಗದ್ದೆ ಇದೆ. ವರ್ಷವೂ ಬಾರೆಪಾಡು ಕಂಬಳ ನಡೆಯುತ್ತದೆ. ಊರ ಮಹಿಳೆಯರು ನೇಜಿ ನೆಡುತ್ತಾ ಪಾಡ್ದನ ಹಾಡುತ್ತಾ ಮರೆತು ಹೋಗುತ್ತಿರುವ ಕೃಷಿ ಸಂಸ್ಕೃತಿಯನ್ನು ಪುನರಪಿ ನೆನಪಿಸುತ್ತಾರೆ. ಅಲ್ಲದೆ ಇಲ್ಲಿನ ಕಂಬಳದ ಗದ್ದೆಗೆ ತಳಿರಿನ ಕಾಪು ಕಾವಲಿನ ಸಂಕೇತ ಇಡುವ ಸಂಪ್ರದಾಯವಿದೆ.

Kinnigoli-18061402

Nishanth Kilenjoor

Comments

comments

Comments are closed.

Read previous post:
ಕರ್ನಿರೆ ಕಾರ್ಮಿಕ ಆತ್ಮಹತ್ಯೆ

ಬಳ್ಕುಂಜೆ : ಬಳ್ಕುಂಜೆ  ಗ್ರಾಮದ ಕರ್ನೀರೆ ಕೊಪ್ಪಳ ನಿವಾಸಿ ಅನಿಲ ಕುಮಾರ ಪೂಜಾರಿ(24) ಎಂಬಾತನು ಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಈತ ಬಳ್ಕುಂಜೆ ಶಾಂಭವಿ ನದಿಯಲ್ಲಿ...

Close